ಎಡಮಂಗಲ ನಡುಬೈಲು ರಸ್ತೆ ಮಧ್ಯೆ ಪೂರ್ಣ ಪ್ರಮಾಣದ ಸೇತುವೆ (ಮೋರಿ) ಸಂಕ ಆಗಬೇಕಿದೆ. ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಒಳಮಾರ್ಗವಾಗಿ ಒಂದು ಕಿ. ಮೀ ಕಚ್ಚಾ ರಸ್ತೆ ಇದ್ದು, ಮಧ್ಯ ಭಾಗದ ಅಳಕೆಯಲ್ಲಿ ಹಳೆಯ ಕಾಲದ ಕಾಲು ಸಂಕದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ ಅಲ್ಲಿ ಮೋರಿ ಅಗತ್ಯವಿದೆ. ಈಗಿನ ಪರಿಸ್ಥಿತಿಯಲ್ಲಿ ಒಂದು ವಾಹನ ನಿಲ್ಲಿಸಿ ನಡೆದುಕೊಂಡು ಹೋಗಬೇಕಾಗುತ್ತದೆ.
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ನಡುಬೈಲು ಸುಬ್ರಾಯ ದೇವಸ್ಥಾನಕ್ಕೆ ಭಕ್ತಾದಿಗಳು ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಎಡೆ ಬಿಡದೆ ಮಳೆ ಬಂದರೆ ಮನೆಯ ಸರಕು ಸಾಮಾನುಗಳನ್ನು ತಲೆ ಹೊರೆಯಲ್ಲಿಯೇ ಹೋಗಬೇಕಾಗಿದೆ. ಊರಿನವರು ಸೇರಿಕೊಂಡು ಮೋರಿ ತಂದು ಹಾಕಿದ್ದಾರೆ . ಈ ರಸ್ತೆಯನ್ನು ನೂರಾರು ಮನೆಯವರು ಅವಲಂಭಿಸಿದ್ದು, ಕೂಡಲೇ ಸೂಕ್ತ ವ್ಯವಸ್ಥೆ ಮಾಡಬೇಕು. ಸಂಬಂಧ ಪಟ್ಟವರು ಗಮನಿಸಿ ಕಾಯಕಲ್ಪ ನೀಡಬೇಕೆಂದು ಆ ಭಾಗದ ನಿವಾಸಿಗಳು ತಿಳಿಸಿದ್ದಾರೆ.