ಪೈಚಾರ್ ಅಲ್ ಅಮೀನ್ವತಿಯಿಂದ ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೂ 23 ರಂದು ಖುವ್ವತ್ತುಲ್ ಇಸ್ಲಾಂ ಮದರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದುಆ ಮೂಲಕ ಸ್ಥಳೀಯ ಮುಅಲ್ಲಿಮ್
ಹನೀಫ್ ಮದನಿ ಮಂಡೆಕೋಲು ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಇದರ ಅಧ್ಯಕ್ಷ ಆಶ್ರಫ್ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಿ ಜೆ ಎಮ್ ಖತೀಬರಾದ . ಶಮೀರ್ ನಹಿಮಿ ನೆರವೇರಿಸಿದರು.
ಅರಣ್ಯಧಿಕಾರಿ ವೆಂಕಟೇಶ್ ರವರು ಸಸಿ ವಿತರಣೆ ನಡೆಸಿ ಪರಿಸರದ ಬಗ್ಗೆ ಮಾತನಾಡಿದರು.
ಬಳಿಕ ಎಸ್ ಎಸ್ ಎಲ್ ಸಿ ಹಾಗೂ ದ್ವೀತಿಯ ಪಿ ಯು ಸಿ ಯಲ್ಲಿ ಉತ್ತಮ ಶ್ರೇಣಿಯಯಲ್ಲಿ
ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿಗಳನ್ನು ಯೂತ್ ಸೆಂಟರ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕುರ್ ಆನ್ ಕಂಠಪಾಠ ಮಾಡಿ ಹಾಫಿಲ್ ಬಿರುದು ಪಡೆದ ಸ್ಥಳೀಯ ವಿದ್ಯಾರ್ಥಿನಿ ಫಾತೀಮತ್ ಶಫ್ರೀನಾ ಶರೀಫ್ ಇವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿದರು.
ವೇದಿಕೆಯಲ್ಲಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಶರೀಫ್ ಟಿ ಎ.,ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರುಗಳು,ಜಮಾಹತ್ ಸದಸ್ಯರುಗಳು,ಹಾಗೂ ಖುವ್ವತ್ತುಲ್ ಇಸ್ಲಾಂ ಮದರಸ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ
ಸತ್ತಾರ್ ಪೈಚಾರ್ ಸ್ವಾಗತಿಸಿ
ಕಾರ್ಯಕ್ರಮವನ್ನು ನಿರೂಪಿಸಿದರು.