ಅರಂತೋಡು: ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಪಾಠ

0

ಅರಂತೋಡು: ಭತ್ತದ ಕೃಷಿ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ನೆಹರು ಸ್ಮಾರಕ ಪದವಿ ಕಾಲೇಜಿನ ಎನ್ಎಸ್ಎಸ್ ಮತ್ತು ಕಲಾ ಸಂಘಗಳ ಆಶ್ರಯದಲ್ಲಿ ಸುಳ್ಯ ತಾಲೂಕಿನ ಅರಂಬೂರು ಶಿವಣ್ಣ ಪರಿವಾರ್ ಕುಟುಂಬದ ಭತ್ತದ ಗದ್ದೆಯಲ್ಲಿ ನಿವೃತ್ತ ಪೋಲಿಸ್ ಶ್ರೀ ಕೇಶವ ಪರಿವಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಕೃಷಿ ಕಾಯಕದ ಮಹತ್ವವನ್ನು ತಿಳಿಸಿ ಕೊಡಲಾಯಿತು.ವಿದ್ಯಾರ್ಥಿಗಳು ಭತ್ತದ ನಾಟಿ ಮಾಡುವ ಕೆಲಸದ ಜೊತೆಯಲ್ಲಿ ಗದ್ದೆಯಲ್ಲಿ ಮನೋರಂಜನೆಯ ಆಟಗಳನ್ನು ಆಡಿ ಮಣ್ಣಿನ ಮಕ್ಕಳಾದರು. ಹಾಗೆಯೇ ರೈತರ ಶ್ರಮದಾಯಕ ಕೆಲಸ ಕಾರ್ಯಗಳ ಅರಿವುವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.


ಕಾಲೇಜಿನ 65 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಲಾ ಸಂಘದ ಮಾರ್ಗದರ್ಶಕರಾದ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಕಾರ್ಯಕ್ರಮ ಸಂಘಟಿಸಿದರು. ಉಪನ್ಯಾಸಕರಾದ ಶ್ರೀಮತಿ ನಂದಿನಿ, ಶ್ರೀಮತಿ ಶಾಂತಿ,ಮೋಹನ್ ಚಂದ್ರ ಮತ್ತು ಚಂದ್ರಶೇಖರ್ ಸಹಕರಿಸಿದರು.ವಿದ್ಯಾರ್ಥಿಗಳಿಗೆ ಫಲಾಹಾರ ವ್ಯವಸ್ಥೆಯನ್ನು ಶಿವಣ್ಣ ಮತ್ತು ಕುಟುಂಬದರ ನೀಡಿ ಸಹಕರಿಸಿದರು.