ಕೋಲ್ಚಾರು ಬಂದಡ್ಕ ಸಂಪರ್ಕದ ರಸ್ತೆಯ ಮಧ್ಯೆ ಕಣಕ್ಕೂರು ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂ.30 ರಂದು ವರದಿಯಾಗಿದೆ.
ಕೇರಳದ ಬಂದಡ್ಕದಿಂದ ಸುಳ್ಯ ಕಡೆಗೆ ಬರುತ್ತಿದ್ದ ವೊಕ್ಸ್ ವ್ಯಾಗನ್ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಕಾರಿನಲ್ಲಿ ಓರ್ವ ಮಹಿಳೆ ಸೇರಿ ಇಬ್ಬರು ಮಾತ್ರ ಸಂಚರಿಸುತ್ತಿದ್ದರೆಂದು ತಿಳಿದು ಬಂದಿದೆ. ಅಲ್ಪ ಸ್ವಲ್ಪ ಗಾಯಗೊಂಡ ಅವರಿಬ್ಬರನ್ನು ಸ್ಥಳೀಯರು ಸೇರಿ ಬೇರೆ ವಾಹನದಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿ ತಿಳಿದು ಬಂದಿದೆ.