ಗುತ್ತಿಗಾರು: ಶಿವರಾಮ ದೇವ ಅವರ ಮನೆಗೆ ಮರ ಬಿದ್ದು ಹಾನಿ

0

ಗುತ್ತಿಗಾರು ಗ್ರಾಮದವರಾಗಿದ್ದು ಗುತ್ತಿಗಾರಿನಲ್ಲಿ ಪ್ರಕೃತಿ ಸ್ಟುಡಿಯೋ ಹೊಂದಿರುವ ಶಿವರಾಮ ದೇವ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾದ ಘಟನೆ ಇಂದು ವರದಿಯಾಗಿದೆ.


ಇಂದು ಬೆಳಗ್ಗೆ 6.30 ರ ಸುಮಾರಿಗೆ ಬೀಸಿದ ಗಾಳಿಗೆ ಪಕ್ಕದ ಜಾಗದಲ್ಲಿದ್ದ ಮರವೊಂದು ಮನೆಯ ಎದುರು ಭಾಗಕ್ಕೆ ಬಿದ್ದಿದ್ದು ಮನೆಯ ಸಿಮೆಂಟ್ ಶೀಟ್ ಗಳಿಗೆ ಹಾನಿಯಾಗಿದೆ.

ಕೆಲ ಅಡಿಕೆ ಗಿಡಗಳು, ಹಾಗೂ ನಾಯಿ ಗೂಡಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ಇಲ್ಲಿ ಇನ್ನಷ್ಟು ಅಪಾಯಕಾರಿ ಮರವಿದ್ದು ಅದನ್ನು ತೆರವುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.