ಸಂಪೂರ್ಣ ಶಿಥಿಲಗೊಂಡ ಜಳಕದಹೊಳೆ ಸೇತುವೆ

0

ಸಂಪೂರ್ಣ ಶಿಥಿಲಗೊಂಡ ಜಳಕದಹೊಳೆ ಸೇತುವೆ ಇಲ್ಲಿ ಯಾವ ಕ್ಷಣದಲ್ಲೂ ಅವಘಡ ಸಂಭವಿಸಬಹುದು

ಪಂಜ- ಬಳ್ಳಕ ಮಾರ್ಗವಾಗಿ ಗುತ್ತಿಗಾರು ಸಂಪರ್ಕಿಸುವ ರಸ್ತೆಯಲ್ಲಿ ಜಳಕದಹೊಳೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ.

ಹಳೇಯ ಸೇತುವೆ ಇದಾಗಿದ್ದು , ಯಾವ ಕ್ಷಣದಲ್ಲೂ ಅವಘಡ ಸಂಭವಿಸ ಬಹುದಾದ ಸಾದ್ಯತೆ ಇದೆ. ಪ್ರತಿ ದಿನ ಸರಕಾರಿ ಬಸ್ ಸೇರಿದಂತೆ ನೂರಾರು ವಾಹನಗಳು ಇದೇ ಸೇತುವೆ ಮೇಲೆ ಸಂಚರಿಸುತ್ತವೆ.ಸೇತುವೆಯ ಮೇಲೆ ಬದಿಗೆ ಇರುವ ಗಾರ್ಡ್ ಒಂದು ಬದಿಯಲ್ಲಿ ಮುರಿದು ಹೋಗಿದ್ದು ವಾಹನ ಸವಾರರಿಗೆ ಅಪಾಯ ಕಾದಿದೆ.


ಈ ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದು ಹೊಸ ಸೇತುವೆ ನಿರ್ಮಾಣ ಮಾಡುವಂತೆ ಪಂಜ ಗ್ರಾಮ ಪಂಚಾಯತ್ ನಿಂದ ನಿರ್ಣಯಿಸಿ ಈ ಹಿಂದೆಯೇ ಸರ್ಕಾರಕ್ಕೆ ಕಳುಹಿಸಲಾಗಿದೆ.
ಸಂಬಂಧ ಪಟ್ಟ ಜನಪ್ರತಿನಿಧಿಗಳು ಈ ಬಗ್ಗೆ
ಗಮನ ಹರಿಸಿ ನೂತನ ಸೇತುವೆ ನಿರ್ಮಾಣ ಕಾರ್ಯ ಆಗ ಬೇಕಾಗಿದೆ. -ಮಧು ಪಂಜ