2023-24 ನೇ ಸಾಲಿನಲ್ಲಿ ಕೈಗೊಂಡಿರುವ ಅತ್ಯುತ್ತಮ ಸೇವಾ ಕಾರ್ಯಗಳು ಅಂತಾರಾಷ್ಟ್ರೀಯ ಲಯನ್ಸ್ ಗೆ ನೀಡಿರುವ ಗುರುತರ ದೇಣಿಗೆ , ನೂತನ ಲಯನ್ಸ್ ಭವನ ನಿರ್ಮಾಣ,ಹಾಗೇನೇ ಜಿಲ್ಲಾ ಗವರ್ನರ್ ರವರ ಕಾರ್ಯಕ್ರಮಗಳಾದ ಸೂರು ಇಲ್ಲದವರಿಗೆ ಸೂರು ನಿರ್ಮಾಣ, ಹಸಿವು, ಪರಿಸರ,ಮಕ್ಕಳ ಕ್ಯಾನ್ಸರ್ ಮಾಹಿತಿ, ರಕ್ತದಾನ, ಅಂಗಾoಗ ದಾನ, ಶಿಕ್ಷಣ ಕ್ರೀಡೆ, ಕೌಶಲ್ಯ ವಿಕಸನ, ಸರ್ಕಾರದ ಯೋಜನೆಗಳು, ಮಹಿಳಾ ಸಬಲೀಕರಣ ಹೀಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ನೀಡಿರುವ ಪಂಜ ಲಯನ್ಸ್ ಕ್ಲಬ್ ಹಲವಾರು ಜಿಲ್ಲಾ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
ಮುಲ್ಕಿಯ ಸುಂದರ ರಾo ಸಭಾಭವನದಲ್ಲಿ ಜುಲೈ 6 ರಂದು ಸಂಜೆ ನಡೆದ ಲಯನ್ಸ್ ಜಿಲ್ಲೆ 317D ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೇಲ್ವಿನ್ ಡಿಸೋಜಾ ಅವರಿಂದ ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿ ಆನಂದ ಗೌಡ, ನಿಯೋಜಿತ ಅಧ್ಯಕ್ಷ ಶಶಿಧರ ಪಳಂಗಾಯ ,ಪೂರ್ವಾಧ್ಯಕ್ಷ ರುಗಳಾದ ಬಾಲಕೃಷ್ಣ ಕುದ್ವ ಬಾಲಕೃಷ್ಣ ಗೌಡ ಮೂಲೆಮನೆ, ಡಾಕ್ಟರ್ ಪ್ರಕಾಶ್ ಡಿಸೋಜಾ ಸಂತೋಷ್ ಜಾಕೆ ,ಪದಾಧಿಕಾರಿಗಳಾದ ನಾಗೇಶ್ ಕಿನ್ನಿ ಕುಮೇರಿ ,ಬಾಲಿಶ್ ಪಳಂಗಾಯ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.