ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಅರೆಭಾಷೆ ಅಕಾಡೆಮಿ ಸದಸ್ಯೆಯಾಗಿ ಆಯ್ಕೆಗೊಂಡ ಲತಾಪ್ರಸಾದ್ ಕುದ್ಪಾಜೆಯವರಿಗೆ ಸನ್ಮಾನ

0

ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಕರ್ನಾಟಕ ಸರಕಾರದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ ಅಯ್ಕೆಗೊಂಡ ಲತಾ ದೇವಿಪ್ರಸಾದ್ ಕುದ್ಪಾಜೆಯವರಿಗೆ ಸನ್ಮಾನ ಕಾರ್ಯಕ್ರಮ ಹಳೆಗೇಟಿನ ಸಂತೃಪ್ತಿ ರೆಸ್ಟೋರೆಂಟ್‌ನಲ್ಲಿ ನಲ್ಲಿ ಜು.6ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಮಹಿಳಾ ಘಟಕದ ಅಧ್ಯಕ್ಷೆ ಶೀಲಾ ಅರುಣ್ ಕುರುಂಜಿ ವಹಿಸಿದ್ದರು. ಕಾರ್ಯದರ್ಶಿ ಕುಸುಮ ಜನಾರ್ಧನ ಕೊಳಂಜಿಕೋಡಿ ವೇದಿಯಲ್ಲಿದ್ದರು.

ಸಮಾರಂಭದಲ್ಲಿ ಉಷಾ ರಮಾನಾಥ ಕಾನತ್ತಿಲ, ಶೋಭಾ ಜಗದೀಶ್ ಕಿರ್ಲಾಯ ಹಾಗೂ ಪೂಜಾಶ್ರೀ ವಿತೇಶ್ ಕೋಡಿಯವರನ್ನು ಘಟಕಕ್ಕೆ ಹೊಸತಾಗಿ ಸೇರ್ಪಡೆಗೊಳಿಸಲಾಯಿತು.

ಶಿಕ್ಷಕಿ ಚಂದ್ರಮತಿ ಹಾಗೂ ಗೌಡ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಸನ್ಮಾನಿತರ ಕುರಿತು ಮಾತಾನಾಡಿದರು.

ಸನ್ಮಾನ ಸ್ವೀಕರಿಸಿದ ಲತಾ ಪ್ರಸಾದ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಘಟಕದಿಂದ ಎಲ್ಲರ ಸಹಕಾರ ಕೋರಿದರು.

ಈ ಸಂಧರ್ಭದಲ್ಲಿ ಜಲಜಾಕ್ಷಿ ಚೆನ್ನಪ್ಪ, ಉಷಾಚಂದ್ರಶೇಖರ ಪೇರಾಲು, ಶೀತಲ್, ಶೇಷಮ್ಮ, ಹರ್ಷಕರುಣಾಕರ ಸೇರ್ಕಜೆ, ಹೇಮಲತಾ ದೆಂಗೋಡಿ, ಸರೋಜಿನಿ ಪೆಲ್ತಡ್ಕ, ವಿಜೇತಮಂಜುನಾಥ್ ಸುಳ್ಯ
ತಿಮ್ಮಯ್ಯ ಪಿಂಡಿಮನೆ, ರಾಕೇಶ್ ಕುಂಟಿಕಾನ, ಪ್ರಸಕ್ತ ಕುದ್ಪಾಜೆ , ಸೌಮ್ಯ
ಅನಿಲ್ ಕೊಳಂಜಿಕೋಡಿ ಉಪಸ್ಥಿತರಿದ್ದರು.

ಜನಾರ್ಧನ ಕೊಳಂಜಿಕೋಡಿ ಪ್ರಾರ್ಥಿಸಿ, ಶೀಲಾ ಕುರುಂಜಿ ಕಾರ್ಯಕ್ರಮ ನಿರೂಪಿಸಿ, ಕುಸುಮ ಜನಾರ್ಧನ ಕೊಳಂಜಿಕೋಡಿ ಧನ್ಯವಾದ ಗೈದರು.