ಲ. ರೇಣುಕಾ ಸದಾನಂದ ಜಾಕೆ ಎಂಜೆಎಫ್ ರಿಗೆ ಅತ್ಯುತ್ತಮ ರೀಜನ್ ಚೇರ್‌ಪರ್ಸನ್ ಪುರಸ್ಕಾರ

0

2023-24 ನೇ ಸಾಲಿನಲ್ಲಿ ಲಯನ್ಸ್ ಜಿಲ್ಲೆ 317 -D, ರೀಜನ್ -7 ನ ಪ್ರಾಂತ್ಯಧ್ಯಕ್ಷರಾಗಿದ್ದ . ರೇಣುಕಾ ಸದಾನಂದ ಜಾಕೆಯವರ ಅತ್ಯುತ್ತಮ ಸೇವಾ ಕೈಂಕರ್ಯವನ್ನು ಗುರುತಿಸಿ ಲಯನ್ಸ್ ಜಿಲ್ಲೆ 317 -D ಯಲ್ಲಿ ಅತ್ಯುತ್ತಮ ರೀಜನ್ ಚೇರ್ ಪರ್ಸನ್ ಗೌರವ ಪಡೆದಿದ್ದಾರೆ .

ಪ್ರಾಂತ್ಯ -7ರ ವ್ಯಾಪ್ತಿಗೆ ಒಟ್ಟು 7 ಲಯನ್ಸ್ ಕ್ಲಬ್ ಗಳು ಒಳಗೊಂಡಿದ್ದು, ಇವರ ನಾಯಕತ್ವದಲ್ಲಿ ಪ್ರಾಂತ್ಯ -7 ರಿಂದ ಅಂತರಾಷ್ಟ್ರೀಯ LCIF ಗೆ 12 ಲಯನ್ ಸದಸ್ಯರು ಹಾಗೂ 1 ಲಯನೇತರ ಸದಸ್ಯರನ್ನು ಸೇರಿಸಿ ಒಟ್ಟು 13 ಮಂದಿ ಮೇಲ್ವಿನ್ ಜಾನ್ ಫೆಲೋಶಿಪ್ ಪುರಸ್ಕಾರವನ್ನು ಪಡೆದಿದ್ದರು. ಅಲ್ಲದೆ ಸುಮಾರು 13 ಸಾವಿರ ಡಾಲರ್ ಕೊಡುಗೆಯನ್ನು ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗೆ ಕೊಡುಗೆಯಾಗಿ ನೀಡಲಾಗಿದೆ.

ಲಯನ್ಸ್ ಜಿಲ್ಲಾ ಸೇವಾ ಯೋಜನೆಗೆ 1 ಲಕ್ಷ ರೂಪಾಯಿ ಹಾಗೂ ಪ್ರಾಂತ್ಯ 7 ರಲ್ಲಿ ಕಟ್ಟಡ ನಿರ್ಮಾಣ ಹಂತದಲ್ಲಿರುವ 4 ಲಯನ್ಸ್ ಕ್ಲಬ್ ಗಳಿಗೆ ರೂ.80 ಸಾವಿರ ಕೊಡುಗೆ ಹಾಗೂ 3 ಲಯನ್ಸ್ ಕ್ಲಬ್ ಗಳ ಅಗತ್ಯತೆಗೆ ಸ್ಪಂದಿಸಿ ಸೇವಾ ಚಟುವಟಿಕೆಗಳನ್ನು ನಡೆಸಿದ್ದರು.

ಮಾತ್ರವಲ್ಲದೆ ಪ್ರಾಂತ್ಯ 7 ರ ವ್ಯಾಪ್ತಿಗೊಳಪಟ್ಟ 7 ಲಯನ್ಸ್ ಕ್ಲಬ್ ಗಳು ಸದಾ ಚಟುವಟಿಕೆಯಿಂದ ಕೂಡಿರುವಂತೆ ಮಾಡಿರುವುದು ಇವರ ಸಾಧನೆ. ಈ ಬಾರಿ 5 ಲಯನ್ಸ್ ಕ್ಲಬ್ ಗಳು ಲಯನ್ಸ್ ಜಿಲ್ಲೆಯಲ್ಲಿ ಅತ್ಯುತ್ತಮ ಸಂಸ್ಥೆಗಳಾಗಿ ಗುರುತಿಸಿಕೊಂಡಿದೆ.

ಇವರು 5೦ ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಲಯನ್ ಕ್ಲಬ್ ಸುಳ್ಯದ ಸದಸ್ಯರು, ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದು ಪ್ರಸ್ತುತ ಸುಳ್ಯ ಲಯನ್ಸ್ ಕ್ಲಬ್ ನ ಪ್ರಥಮ ಮಹಿಳಾ ಪ್ರಾಂತ್ಯಧ್ಯಕ್ಷರೂ ಕೂಡ ಆಗಿರುತ್ತಾರೆ.

ಇವರ ಸೇವಾ ಮನೋಭಾವವನ್ನು ಗುರುತಿಸಿ ನೀಡಲಾದ”Best Rigion Chair person” recognition of outstanding in service exceptional and leadership ಹಾಗೂ BE -KIND Excellence Medal ಗೌರವವನ್ನು ಜುಲೈ 6 ರಂದು ಮುಲ್ಕಿಯ ಸುಂದರಾಮ್ ಶೆಟ್ಟಿ ಕನ್ವೆನ್ಸನ್ ಸೆಂಬರ್ ನಲ್ಲಿ ನಡೆದ 2023-24 ಸಾಲಿನ ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಡಾ| ಮೆಲ್ವಿನ್ ಡಿಸೋಜ PMJF ಹಾಗೂ ಶ್ರೀಮತಿ ಸ್ಮೀತಾ ಡಿಸೋಜಾ ಇವರಿಂದ ಪಡೆದರು.

ಇದೇ ಸಮಾರಂಭದಲ್ಲಿ ಡಿಸ್ಟ್ರಿಕ್ಟ್ ಕನ್ವೆನ್ಸನ್ ಕೋ-ಆರ್ಡಿನೇಟರ್, ಲಯನ್ ಜಾಕೆ ಸದಾನಂದ ಎಂಜೆಎಫ್ ರವರು Diamond Dist. co- ordinator Dist connection ಪುರಸ್ಕಾರವನ್ನು ಪಡೆದರು.