ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ತೃತೀಯ ಭಾಷೆಯಾಗಿ ಸಂಸ್ಕೃತ ಅಳವಡಿಕೆ

0

ಎರಡು ವಾರಗಳ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ

ಜಾಲ್ಸೂರು ಗ್ರಾಮದ ವಿನೊಬನಗರದ  ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಅಳವಡಿಸಲಾಗಿದೆ.

ಸಂಸ್ಕೃತ ಭಾರತಿ ನೇತೃತ್ವದಲ್ಲಿ ಜೂ.24ರಿಂದ ಪ್ರಾರಂಭಗೊಂಡ ಎರಡು ವಾರಗಳ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭವು ಅನುಭವ ಸಭಭವನದಲ್ಲಿ ಜು.6ರಂದು ನಡೆಯಿತು.

ಮುಖ್ಯ ಅಭ್ಯಾಗತರಾಗಿ ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖರಾದ ಸತ್ಯನಾರಾಯಣ ಅವರು ಭಾಗವಹಿಸಿ ಸಂಸ್ಕೃತ ಶ್ರೇಷ್ಟತೆಯನ್ನು ವಿವರಿಸಿದರು.

ವಿದ್ಯಾಸಂಸ್ಥೆಯ ಆಡಳಿತ ಸಂಚಾಲಕರಾದ ಡಾ. ಗೋಪಾಲಕೃಷ್ಣ ಭಟ್ ಕಾಟೂರು ಅವರು ಅಧ್ಯಕ್ಷತೆ ವಹಿಸಿದ್ದರು.

ಪ್ರೌಢ ಶಾಲಾ ಮುಖ್ಯೋ ಪಾಧ್ಯಾಯರಾದ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಅಧ್ಯಾಪಕರಿಂದ ಸಂಸ್ಕೃತ ನಾಟಕ ಪ್ರದರ್ಶನ ನಡೆಯಿತು ಎರಡು ವಾರ ನಡೆದ ಶಿಬಿರದಲ್ಲಿ ಸಂಸ್ಥೆಯ 30 ಮಂದಿ ಅಧ್ಯಾಪಕರು ಭಾಗವಹಿಸಿದ್ದರು.

ಸಂಸ್ಕೃತ ಭಾರತಿಯ ಮಂಗಳೂರು ಜಿಲ್ಲಾ ಸಂಯೋಜಕಿ ಶ್ರೀಮತಿ ಸಂಧ್ಯಾ ಕೆದಿಲಾಯ ತರಬೇತಿ ನೀಡಿದರು. ಹಾಗೂ ಅವರ ಪುತ್ರಿ ಅಮೃತ ಮತ್ತು ಸಂಸ್ಕೃತ ಅಧ್ಯಾಪಕರಾದ ನಿಶಾ ಕುಂಟಾರು ಅವರು ಸಹಾಯಕ ತರಬೇತುದಾರರಾಗಿ ಭಾಗವಹಿಸಿದ್ದರು.

ಸುಮಾರು 25 ವರ್ಷಗಳಿಂದ ಸಂಸ್ಕೃತ ಭಾಷೆಯಲ್ಲಿ ಸಂಸ್ಕೃತ ತರಬೇತಿ ನೀಡುತ್ತಿರುವ ಸಂಧ್ಯಾ ಕೆದಿಲಾಯ ಅವರನ್ನು ಅಧ್ಯಾಪಕರು ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಎಲ್ಲಾ ಅಧ್ಯಾಪಕರು ಸಂಸ್ಕೃತ ಭಾರತಿಯ ಸಂಸ್ಕೃತ ಪ್ರವೇಶ ಪರೀಕ್ಷೆಗೆ ಹೆಸರು ನೋಂದಯಿಸಿದರು. ಪ್ರೌಢ ಶಾಲಾ ವಿಭಾಗದಲ್ಲಿ 8ನೇ ತರಗತಿಗೆ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಅಳವಡಿಸಿ 22 ವಿದ್ಯಾರ್ಥಿಗಳು ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಅಭ್ಯಾಸ ಮಾಡುತ್ತಿರುವುದಕ್ಕೆ ಸಂಸ್ಕೃತ ಭಾರತಿ ಹರ್ಷ ವ್ಯಕ್ತ ಪಡಿಸಿತು.

ಪ್ರಸ್ತುತ 5 ರಿಂದ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಸಂಸ್ಕೃತ ಅವಧಿಯನ್ನು ಅಳವಡಿಸಿ ಸಂಸ್ಕೃತ ಕಲಿಕೆಗೆ ಒತ್ತು ಕೊಟ್ಟದ್ದಕ್ಕೆ ಪ್ರಶಂಸೆ ವ್ಯಕ್ತ ಪಡಿಸಲಾಯಿತು. ಸಹಶಿಕ್ಷಕಿ ಶ್ರೀಮತಿ ವಾಣಿ ಸ್ವಾಗತಿಸಿ ಶ್ರೀಮತಿ ಪಾವನ ವಂದಿಸಿದರು. ಶ್ರೀಮತಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.