ಬೆಳ್ಳಾರೆ : ಭೀಕರ ಮಳೆಗೆ ಬೆಳ್ಳಾರೆ ಸಂತೆ ಮಾರುಕಟ್ಟೆ ಕೆಸರುಮಯ

0

ಬೆಳ್ಳಾರೆಯಲ್ಲಿ ಸುರಿದ ಭಾರೀ ಮಳೆಗೆ ಸಂತೆ ಮಾರುಕಟ್ಟೆ ಕೆಸರುಮಯವಾಗಿದೆ.
ಸಂತೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಯಿತು.


ವಾಹನ ಪಾರ್ಕಿಂಗ್ ಗೂ ಸಮಸ್ಯೆಯಾಗಿತ್ತು.
ಚರಂಡಿ ಇದ್ಸರೂ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿಯೆ ಹರಿಯುತ್ತಿದ್ದು ರಸ್ತೆಯು ಕೆಸರುಮಯವಾಗಿದೆ.
ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ.