ಪ್ರಭಾಕರ ಬೆಳ್ಚಪ್ಪಾಡ ಬಾಡೇಲು ನಿಧನ

0

ಅಜ್ಜಾವರ ಗ್ರಾಮದ ಮೇನಾಲ – ಬಾಡೇಲು ನಿವಾಸಿ ಪ್ರಭಾಕರ ಬೆಳ್ಚಪ್ಪಾಡರವರು ಅಸೌಖ್ಯದಿಂದ ಜು.6ರಂದು ನಿಧನರಾದರು. ಅವರಿಗೆ ಸುಮಾರು 54 ವರ್ಷ ವಯಸ್ಸಾಗಿತ್ತು.

ಅವಿವಾಹಿತರಾಗಿದ್ದ ಇವರು ಬಾಡೇಲಿನಲ್ಲಿ ಒಬ್ಬರೇ ವಾಸವಿದ್ದರು.

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಪ್ರಭಾಕರರ ಮನೆ ಶಿಥಿಲಗೊಂಡು ಪ್ಲಾಸ್ಟಿಕ್ ಡೇರೆಯಲ್ಲಿ ವಾಸವಿದ್ದರು. ಇದನ್ನು ಮನಗಂಡ ಮೇನಾಲ ಕಾಂಗ್ರೆಸ್ ಗ್ರಾಮ ಸಮಿತಿಯವರು ರೂ.1 ಲಕ್ಷ ದೇಣಿಗೆ ಸಂಗ್ರಹಿಸಿ ಮನೆ ನಿರ್ಮಿಸಿ ಕೊಟ್ಟು ತಿಂಗಳ ಹಿಂದೆ ಗೃಹಪ್ರವೇಶ ನಡೆದಿತ್ತು.