ಜು. 25ರಂದು ನಿಧನರಾದ ಕಳಂಜ ಗ್ರಾಮದ ಶೇಡಿಕಜೆ ನಿವಾಸಿ ಕೋಕೇರಿ ಸುಬ್ಬಪ್ಪಯ್ಯರಿಗೆ ಶ್ರದ್ಧಾಂಜಲಿ ಸಭೆ ಆ. 7ರಂದು ಮೃತರ ಸ್ವಗೃಹ ಶೇಡಿಕಜೆಯಲ್ಲಿ ನಡೆಯಿತು.
ನಿವೃತ್ತ ಪ್ರಾಂಶುಪಾಲರಾದ ಡಾ. ನಾರಾಯಣ ಶೇಡಿಕಜೆ, ವೆಂಕಟ್ರಮಣ ಭಟ್ ಹಾಳೆಮಜಲು, ನಿವೃತ್ತ ಶಿಕ್ಷಕಿ ಶ್ರೀಮತಿ ರತ್ನ ಮತ್ತು ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರ ಪತ್ನಿ ಶ್ರೀಮತಿ ಕಮಲ, ಪುತ್ರಿ ಶ್ರೀಮತಿ ಆಶಾಕಿರಣ, ಅಳಿಯ ರಾಮಚಂದ್ರ ಪ್ರಸಾದ್ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು. ಗಣಪಯ್ಯ ಹಾಳೆಮಜಲು ಕಾರ್ಯಕ್ರಮ ನಿರೂಪಿಸಿದರು.