ಪೆರುವಾಜೆ : ಕೊಲ್ಯ ಪೆಲತ್ತಡ್ಕ ರಸ್ತೆ ಮಳೆಯಿಂದ ಕೆಸರುಮಯ ಸಂಚಾರಕ್ಕೆ ತೊಂದರೆ

0

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಂಡ — ಕೊಲ್ಯ ರಸ್ತೆ ಮತ್ತು ಪೆಲತ್ತಡ್ಕ — ಆಲಂತಡ್ಕ ರಸ್ತೆಗಳು ತೀವ್ರ ಮಳೆಯಿಂದ ಹಾನಿಯಾಗಿದ್ದು ಜನತೆಗೆ ನಡೆದಾಡಲು ಕಷ್ಟಕರವಾಗಿದೆ. ಗ್ರಾಮ ಪಂಚಾಯತಿಗೆ ಬರುವ 15 ನೇ ಹಣಕಾಸು ಯೋಜನೆಯಲ್ಲಿ ಇದೆಲ್ಲವನ್ನೂ ಕಾರ್ಯ ನಿರ್ವಹಿಸಲು ಅಸಾಧ್ಯ ಪರಿಸ್ಥಿತಿ, ಇದಕ್ಕೆ ಸರ್ಕಾರದ ಮಟ್ಟದಲ್ಲಿ ಶಾಸಕರು ಮಳೆ ಹಾನಿ ಯೋಜನೆ ಮೂಲಕ ಅನುದಾನ ತರುವ ಅಗತ್ಯವಿದೆ ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.

ಈ ರಸ್ತೆಗಳು ಸುಮಾರು 30 ವರುಷಗಳಿಂದ ಅಭಿವೃದ್ಧಿ ಆಗಿಲ್ಲ, ಅಗತ್ಯ ಇದ್ದಲ್ಲಿ ಅನುದಾನ ನೀಡದೆ ಇರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.