ಕಳಂಜ ಮುಅಲ್ಲಿಂ ಡೇ ದಿನಾಚರಣೆ

0



ಕಳಂಜ ಬುಖಾರಿಯಾ ಜುಮ್ಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಂ ಮದ್ರಸ ವತಿಯಿಂದ ಸಮಸ್ತ ಕೇರಳ ಜಂಇಯತುಲ್ ಉಲಮಾ ಇದರ ಇದರ ನಿರ್ದೇಶ ಪ್ರಕಾರ “ಮುಅಲ್ಲಿಂ ಡೇ ದಿನಾಚರಣೆಯನ್ನು ಆಚರಿಸಲಾಯಿತು. ಸದರ್ ಉಸ್ತಾದ್ ಅಬ್ಬಾಸ್ ಮದನಿ , ಮದ್ರಸ ಅದ್ಯಾಪಕರು ಹಸೈನಾರ್ ಮುಸ್ಲಿಯಾರ್ ಬುಖಾರಿಯ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಮಜೀದ್ ಎ.ಕೆ, ಅಬೂಬಕ್ಕರ್ ಜೊತೆ ಕಾರ್ಯದರ್ಶಿ, ಮುಹಮ್ಮದ್ ಎನ್, ಕಳಂಜ ಜಮಾಅತ್ ಕಮಿಟಿ ಸದಸ್ಯರು ಊರಿನ ಪ್ರಮುಖರ ಮತ್ತು ಮದ್ರಸ ವಿದ್ಯಾರ್ಥಿಗಳ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅಬ್ಬಾಸ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ದುಆಶೀರ್ವಚವನಗೈದರು. ಹಸೈನಾರ್ ಉಸ್ತಾದ್, ಸಮಸ್ತ ದಿನಾಚರಣೆಯ ಮಹತ್ವದ ಬಗ್ಗೆ ಖತೀಬ್ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮದ್ರಸ ಸುನ್ನಿ ಬಾಲ ವೇದಿ ಸದಸ್ಯರಿಂದ ವೈವಿದ್ಯಮಯ ಕಾರ್ಯಕ್ರಮಗಳುನಡೆಯಿತು.

ನಂತರ ಮದ್ರಸದ ಗುರುಗಳನ್ನು ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಅಬ್ದುಲ್ ಮಜೀದ್ ಎ. ಕೆ, ಅಬೂಕ್ಕರ್ ಅಡಿಕೆ ವ್ಯಾಪಾರಿಗಳು, ಮುಹಮ್ಮದ್ ಎನ್ ಉಪಸ್ಥಿತರಿದ್ದರು. ನಂತರ ಖಬರ್ ಝಿಯಾರತ್ ಕೂಟು ಪ್ರಾರ್ಥನೆ ಸಿಹಿತಿಂಡಿ ವಿತರಣೆ ಕಾರ್ಯಕ್ರಮ ಬಳಿಕ ಹಸೈನಾರ್ ಉಸ್ತಾದರ ವಂದಿಸಿದರು.