ಶ್ರೀಮತಿ ರತಿ ವಿ ರೈ ಪೋಳಾಜೆ ನಿಧನ

0

ಮುರುಳ್ಯ ಗ್ರಾಮದ ಪೋಳಾಜೆ ಶ್ರೀಮತಿ ರತಿ ವಿ ರೈ ರವರು ಅಲ್ಪ ಕಾಲದ ಅಸೌಖ್ಯದಿಂದ ಜು.9 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಅವರು ಮುರುಳ್ಯ ಪಂಚಾಯತ್ ಮಾಜಿ ಸದಸ್ಯರಾಗಿದ್ದು, ಪ್ರಗತಿಪರ ಕೃಷಿಕರಾಗಿ, ಹೈನುಗಾರರಾಗಿದ್ದರು.


ಮೃತರು ಪತಿ ಮುರುಳ್ಯ ಸೊಸೈಟಿ ಮಾಜಿ ಕಾರ್ಯದರ್ಶಿ, ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನದ ಮಾಜಿ ಅಧ್ಯಕ್ಷ, ಪ್ರಸ್ತುತ ಸದಸ್ಯರಾಗಿರುವ ಪತಿ ವಿಠಲ ರೈ ಪೋಳಾಜೆ, ಪುತ್ರರಾದ ಅರುಣ್ ಕುಮಾರ್ ರೈ, ಅನಿಲ್ ರೈ, ಅಶೋಕ್ ರೈ ಬೆಂಗಳೂರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.