ಬೊಳುಬೈಲು :ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಸುಳ್ಯ ತಾಲೂಕು ಆಶ್ರಯದಲ್ಲಿ ಗಿಡ ನಾಟಿ ಮತ್ತು ಪರಿಸರ ಮಾಹಿತಿ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಬೊಳುಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.11ರಂದು ನಡೆಯಿತು.

ಕಾರ್ಯಕ್ರಮವನ್ನು ಬೊಳುಬೈಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಾಲಸುಬ್ರಮಣ್ಯ ಬೈತಡ್ಕ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿ, ಶುಭಹಾರೈಸಿದರು.

ಸುಳ್ಯ ತಾಲೂಕು ಯೋಜನೆಯ ಕೃಷಿ ಮೇಲ್ವಿಚಾರಕ ರಮೇಶ್ ಅವರು ಯೋಜನೆಯ ಕಾರ್ಯಕ್ರಮಗಳು ಮತ್ತು ಪರಿಸರದ ಬಗ್ಗೆ ಮಾಹಿತಿ ನೀಡಿದರು. ಬೋಳುಬೈಲು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾದಮ್ಮ ಅವರು ಮಕ್ಕಳಿಗೆ ಪರಿಸರದ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತ ಮಕ್ಕಳ ಹೆಸರನ್ನು ಸೂಚಿಸಿದರು.
ವೇದಿಕೆಯಲ್ಲಿದ್ದ ಗಣ್ಯರುಗಳಿಂದ ಯೋಜನೆಯಿಂದ ನೀಡಿದ ಬಹುಮಾನ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಣಿ ದೈವಸ್ಥಾನದ ಪ್ರಧಾನ ಅರ್ಚಕರಾದ ಸುಭಾಷ್ ರೈ , ನವಚೇತನ ಯುವಕ ಮಂಡಲದ ನಿಕಟ ಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕುಂಬರ್ಚೋಡು ಉಪಸ್ಥಿತರಿದ್ದರು.
ಬೊಳುಬೈಲು ಒಕ್ಕೂಟದ ಅಧ್ಯಕ್ಷ ಪದ್ಮನಾಭ ನೆಕ್ರಾಜೆ ಸ್ವಾಗತಿಸಿ, ಜಾಲ್ಸೂರು ವಲಯದ ಮೇಲ್ವಿಚಾರಕ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು. ಬೋಳುಬೈಲು ಸೇವಾಪ್ರತಿನಿಧಿ ಶ್ರೀಮತಿ ಸಂದ್ಯಾ ವಂದಿಸಿದರು.