ಏಳನೇ ವೇತನ ಆಯೋಗ ಜಾರಿ, ಎನ್.ಪಿ.ಎಸ್. ರದ್ದತಿ ಸಹಿತ ವಿವಿಧ ಬೇಡಿಕೆ ಈಡೇರಿಸಿ

0

ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದು, NPS ರದ್ದುಪಡಿಸಿ OPS ಯೋಜನೆಯನ್ನು ಮರು ಸ್ಥಾಪಿಸುವುದು ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರಕಾರಿ ನೌಕರರ ಸಂಘ ಸುಳ್ಯ ಶಾಖೆ ವತಿಯಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜು.10ರಂದು‌ಮನವಿ ಸಲ್ಲಿಸಲಾಗಿದ್ದು ಜು. 7ರಂದು ಚಿಕ್ಕಮಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ ಈ ಮನವಿ ಸಲ್ಲಿಸಲಾಗಿದೆ.ಏಳನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದು, NPS ರದ್ದುಪಡಿಸಿ OPS ಯೋಜನೆಯನ್ನು ಮರುಸ್ಥಾಪಿಸುವುದು, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವುದು ಮೂರು ಪ್ರಮುಖ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮಂಜುನಾಥ್ ರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಲೂಕು ಸಮಿತಿ ಅಧ್ಯಕ್ಷ ಸಿಂಗಾರ ಶೆಟ್ಟಿ, ರಾಜ್ಯ ಪರಿಷತ್ ಸದಸ್ಯ ಪೃಥ್ವಿ ಕುಮಾರ್, ಪದಾಧಿಕಾರಿಗಳಾದ ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ಉಪತಹಶೀಲ್ದಾರ್ ಚಂದ್ರಕಾಂತ್, ಮಹಾದೇವ ಸ್ವಾಮಿ, ಶಿವಪ್ರಸಾದ್ ಕಡವೆಪಳ್ಳ, ಸನತ್ ಎಸ್.ಪಿ., ಚಿನ್ನಪ್ಪ ಪತ್ತುಕುಂಜ, ಹರ್ಷೇಂದ್ರ ಶೆಟ್ಟಿ, ಮುದ್ದುಕೃಷ್ಣ ಮೊದಲಾದವರಿದ್ದರು.