ಜು.17 ರಿಂದ ಸೆ.02 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ಗಣಪತಿ ಹೋಮ ಮತ್ತು ಶ್ರೀ ದುರ್ಗಾಪೂಜೆ

0

ಇತಿಹಾಸ ಪ್ರಸಿದ್ಧ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜು.17 ರಿಂದ ಸೆ.02 ವರೆಗೆ ಶ್ರೀ ಗಣಪತಿ ಹೋಮ ಮತ್ತು ಶ್ರೀ ದುರ್ಗಾಪೂಜೆ ನಡೆಯಲಿದೆ.
48 ದಿನಗಳ ಕಾಲ ಪೂಜೆ ನಡೆಯಲಿದ್ದು ಪೂಜೆ ಮಾಡಿಸುವ ಭಕ್ತಾದಿಗಳು ರೂ.300 ಪಾವತಿಸಿ ರಶೀದಿ ಪಡಕೊಂಡು ಸೇವಾ ದಿನದಂದು ಮುಂಚಿತವಾಗಿ ತಿಳಿಸಿ ಶ್ರೀ ಜಲದುರ್ಗಾದೇವಿ ಹಾಗೂ ಉದ್ಭವ ಶ್ರೀ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.