ಸುಳ್ಯ ದಸರಾ 2024

0

ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯದಲ್ಲಿ 1972 ನೇ ಇಸವಿಯಲ್ಲಿ ಆರಂಭಗೊಂಡ ಶ್ರೀ ಶಾರದಾಂಬ ಉತ್ಸವ ಕಳೆದ 52 ವರ್ಷಗಳಿಂದ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು, 53ನೇ ವರ್ಷದ ಉತ್ಸವವನ್ನು ನಡೆಸಲು ಸಿದ್ದತೆ ಆರಂಭಗೊಂಡಿದ್ದು, ಇತ್ತೀಚೆಗೆ ನಡೆದ ಸಮಿತಿ ‌ಸಭೆಯಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

53ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸಮಿತಿ


ಮುಂಬರುವ 53ನೇ ವರ್ಷದ ಸುಳ್ಯ ದಸರಾ -2024ರ ಗೌರವಾಧ್ಯಕ್ಷರಾಗಿ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷರಾಗಿ ಡಾ.ಲೀಲಾಧರ್ ಡಿ.ವಿ. ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿಯಾಗಿ ಗಣೇಶ್ ಆಳ್ವ, ಗೌರವ ಸಲಹೆಗಾರರಾಗಿ ಎನ್. ಜಯಪ್ರಕಾಶ್ ರೈ, ಎನ್.ಎ. ರಾಮಚಂದ್ರ, ಎಂ.ವೆಂಕಪ್ಪ ಗೌಡ, ಅಕ್ಷಯ್ ಕೆ.ಸಿ.,
ಉಪಾಧ್ಯಕ್ಷರುಗಳಾಗಿ ಹರೀಶ್ ಕಂಜಿಪಿಲಿ, ಡಾ.ಉಜ್ವಲ್ ಯು.ಜೆ., ಮಾಧವ ಗೌಡ,ವಿಠಲ ಸರ್ವೆಯರ್, ದೊಡ್ಡಣ್ಣ ಬರೆಮೇಲು, ಸತೀಶ್ ಕೆ. ಜಿ.,ಸಂದೇಶ್ ಕುರುಂಜಿ, ಶಿವನಾಥ ರಾವ್, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಸನತ್ ಪೆರಿಯಡ್ಕ, ಜಿನ್ನಪ್ಪ ಪೂಜಾರಿ ,ಜಗದೀಶ್ ಸರಳಿಕುಂಜ, ರಮೇಶ್ ಶೆಟ್ಟಿ, ತೀರ್ಥಕುಮಾರ್ ಕುಂಚಡ್ಕ, ಬಾಲರಾಜ್ ಡಿ.ಎಸ್. ರಂಜಿತ್ ಎನ್.ಆರ್. ಪ್ರಮೋದ್ ಕುಮಾರ್ ಆಯ್ಕೆಯಾದರು.

ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು

ದಸರಾ ಉತ್ಸವ ಸಮಿತಿಯ
ಗೌರವಾಧ್ಯಕ್ಷರಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಧ್ಯಕ್ಷರಾಗಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬೂಡು ರಾಧಾಕೃಷ್ಣ ರೈ, ಖಜಾಂಜಿಯಾಗಿ ಸುನಿಲ್ ಕುಮಾರ್ ಕೇರ್ಪಳ ಆಯ್ಕೆಯಾದರು.

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್

ಶ್ರೀ ಶಾರದಾಂಬ ಸೇವಾ ಟ್ರಸ್ಟ್
ಅಧ್ಯಕ್ಷರಾಗಿ ನವೀನ್ ಚಂದ್ರ ಕೆ.ಎಸ್.,ಕಾರ್ಯದರ್ಶಿಯಾಗಿ ಎಂ. ಕೆ .ಸತೀಶ್ ಹಾಗೂ ಖಜಾಂಜಿಯಾಗಿ ಬೂಡು ರಾಧಾಕೃಷ್ಣ ರೈ ಆಯ್ಕೆಯಾದರು. ಎರಡು ಸಮಿತಿಗಳಿಗೆ ಗೌರವ ಸಲಹೆಗಾರರಾಗಿ ತಹಶೀಲ್ದಾರ್ ಸುಳ್ಯ ತಾಲೂಕು, ಡಾ. ಹರಪ್ರಸಾದ್ ತುದಿಯಡ್ಕ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಪುರೋಹಿತ ನಾಗರಾಜ ಭಟ್, ಕಮಲಾಕ್ಷಿ ವಿ .ಶೆಟ್ಟಿ
ಆಯ್ಕೆಯಾದರು.

ಎಲ್ಲಾ ಸಮಿತಿಗಳಿಗೆ ಪ್ರಧಾನ ಸಂಯೋಜಕರಾಗಿ ಮಾಜಿ ಸಚಿವ ಎಸ್. ಅಂಗಾರ, ಮಾಧ್ಯಮ ವಕ್ತಾರರಾಗಿ ಕೃಷ್ಣಬೆಟ್ಟ, ಭವಾನಿ ಶಂಕರ ಕಲ್ಮಡ್ಕ ಆಯ್ಕೆಯಾದರು.

ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಸುಳ್ಯ- S6


ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ಕೆ. ಗೋಕುಲ್ ದಾಸ್, ಅಧ್ಯಕ್ಷರಾಗಿ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಪಂಡಿತ್, ಜೊತೆ ಕಾರ್ಯದರ್ಶಿಯಾಗಿ ಅನಿಲ್ ಕೆ. ಸಿ.,ಖಜಾಂಜಿಯಾಗಿ ಅಶೋಕ್ ಪ್ರಭು, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಯಶೋದ ರಾಮಚಂದ್ರ, ಹರೀಶ್ ರೈ ಉಬರಡ್ಕ,ಶ್ರೀಮತಿ ಲತಾ ಮಧುಸೂಧನ್, ಬೆಳ್ಯಪ್ಪ ಗೌಡ, ಹೇಮಂತ್ ಕಾಮತ್, ರಾಜೇಶ್ ನಾಯಕ್ ಮತ್ತು ಗೌರವ ಸದಸ್ಯರನ್ನು ಆಯ್ಕೆ ಮಾಡಲಾಯಿತು.