ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ನಿರಂತರ ಯೋಗ ಕೇಂದ್ರ ಪಂಜದ ವಿದ್ಯಾರ್ಥಿಗಳು

0

10 ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಎಸ್. ಜಿ.ಎಸ್ ಇಂಟರ್ನ್ಯಾಷನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ರಿಸರ್ಚ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರ ಕರ್ನಾಟಕ ಸರ್ಕಾರ ಇವರ ಸಹಕಾರದಲ್ಲಿ ಜು.14ರಂದು ಬೆಂಗಳೂರಿನ ಕೋರಮಂಗಲ ಒಳಾoಗಣ ಕ್ರೀಡಾoಗಣದಲ್ಲಿ ನಡೆದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ಪಂಜದ ವಿದ್ಯಾರ್ಥಿ 08 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ತ್ರಿಶಾಲಿ ಎನ್. ಡಿ 6ನೇ ಸ್ಥಾನ ಗಳಿಸಿದ್ದಾರೆ.


ಇವರು ಬಳ್ಪ ಗ್ರಾಮದ ನೇರ್ಪು ಮನೆ ಧನಂಜಯ ಮತ್ತು ಭಾರತಿ ದಂಪತಿಗಳ ಪುತ್ರಿ. ಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

08 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ತರುಣ್ ಎ 5ನೇ ಸ್ಥಾನಗಳಿಸಿರುತ್ತಾರೆ.
ಇವರು ಐವತ್ತೊಕ್ಲು ಗ್ರಾಮದ ಅಲ್ಪೆ ಮೇಲ್ಮನೆ ಸೀತಾರಾಮ ಗೌಡ ಮತ್ತು ಶ್ರೀಮತಿ ಪೂರ್ಣಿಮಾ ದಂಪತಿಗಳ ಪುತ್ರ.
ಕರೀಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರುಗಳು ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.