ಸಂಪಾಜೆ ಗ್ರಾಮದ ಪಡುಮಜಲು ಮನೆಯವರಾಗಿದ್ದು,ಮಂಗಳೂರಿನಲ್ಲಿ ನೆಲೆಸಿರುವ ಅವಿನ್ ಎಂಬವರ ಪತ್ನಿ ಶಿಲ್ಪಾ ಅಸೌಖ್ಯದಿಂದಾಗಿ ಇಂದು ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 32 ವರ್ಷ ವಯಸ್ಸಾಗಿತ್ತು.
ಅವರು ಕೆಲ ಸಮಯಗಳಿಂದ ಅಸೌಖ್ಯತೆಯಿಂದ ಬಳಲುತ್ತಿದ್ದರೆನ್ನಲಾಗಿದೆ.
ಕೊಲ್ಲಮೊಗ್ರು ಗ್ರಾಮದ ಕಂಚುಗಾರಗದ್ದೆ ಚೆನ್ನಪ್ಪ ಗೌಡ ಎಂಬವರ ಪುತ್ರಿ. ಇವರ ಪತಿ ಅವಿನ್ ಮಂಗಳೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಲ್ಪಾರವರು ನರ್ಸ್ ಕೆಲಸ ಮಾಡುತ್ತಿದ್ದರು.
ಮೃತರು ಇಬ್ಬರು ಪುತ್ರಿಯರನ್ನು, ಬಂಧುಗಳನ್ನು ಅಗಲಿದ್ದಾರೆ.