ಸುಳ್ಯ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ಸಭೆ

0
   ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ಘಟಕವಾದ ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರುಗಳ  ಒಕ್ಕೂಟದ ಸಭೆಯು  ಅಧ್ಯಕ್ಷರಾದ ಶೈಲೇಶ್  ಅಂಬೆಕಲ್ಲುರವರ ಅಧ್ಯಕ್ಷತೆಯಲ್ಲಿ ಜು.22 ರಂದು   ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 

ಸಭೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆ ಪಂಚಾಯತ್ ನಲ್ಲಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ವಿವರ ನೀಡಿದರು. ಪಂಚಾಯತ್ ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳಾದ, ಉದ್ಯೋಗ ಖಾತ್ರಿ ಯೋಜನೆಯ ಎನ್. ಎಂ ಎಂ ಎಸ್. ಜಿಪಿಎಸ್ ಸಮಸ್ಯೆ, ಪ್ರಕೃತಿ ವಿಕೋಪ, ಚುನಾವಣಾ ಸಂದರ್ಭದಲ್ಲಿ ಸರಕಾರದ ಅನುದಾನ ಗ್ರಾಮ ಪಂಚಾಯಿತಿಗೆ ಲಭಿಸುವಂತೆ, ಪಂಚಾಯತ್ ಗಳಲ್ಲಿ ಖಾಲಿ ಇರುವ ಸಿಬ್ಬಂದಿ ಭರ್ತಿ ಮಾಡುವ ಬಗ್ಗೆ, ಸಂಜೀವಿನಿ ಒಕ್ಕೂಟಗಳ ಧೋರಣೆಯ ಬಗ್ಗೆ, ಎಸ್ಕ್ರೋ ಅನುದಾನ ಹೆಚ್ಚಿಸುವ ಬಗ್ಗೆ, ಶಾಸನಬದ್ಧ ಅನುದಾನಗಳನ್ನು ಹೆಚ್ಚಿಸುವ ಬಗ್ಗೆ, ವಸತಿ ಯೋಜನೆಗಳು, 9/11 ಸಮಸ್ಯೆಗಳು, ಕೆ.ಡಿ.ಪಿ. ಸಭೆಗಳಲ್ಲಿ ಪಂಚಾಯತ್ ಭಾಗವಹಿಸಲು ಅವಕಾಶ ನೀಡಬೇಕೆಂಬ ಬಗ್ಗೆ ಮತ್ತು ಗ್ರಾಮ ಸಭೆಗಳಲ್ಲಿ ಇಲಾಖಾ ಅಧಿಕಾರಿಗಳ ಗೈರು ಹಾಜರಿ – ಹೀಗೆ ಹತ್ತು ಹಲವು ಸಮಸ್ಯೆಗಳ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಶಾಸಕರಾದ ಕುl ಭಾಗೀರಥಿ ಮುರುಳ್ಯ ಮತ್ತು ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಪ್ರತಿನಿಧಿಗಳಾದ ಮಂಜುನಾಥ ಭಂಡಾರಿ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಲು ತೀರ್ಮಾನಿಸಲಾಯಿತು.

ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಹರೀಶ್ ರೈ ಉಬರಡ್ಕ, ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಕೆಲ ಪಂಚಾಯತ್ ಗಳ ಸದಸ್ಯರುಗಳು ಭಾಗವಹಿಸಿದ್ದರು. ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಸ್ವಾಗತಿಸಿದರು. ಇಂದು ಅಪಘಾತದಲ್ಲಿ ನಿಧನರಾದ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಪ್ರಭುಗಳಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೇಶವ ಅಡ್ತಲೆ ವಂದಿಸಿದರು.