ಮಂಡೆಕೋಲುಮನೆಗೆ ತೆಂಗಿನ ಮರ ಬಿದ್ದು ಹಾನಿ

0

ಪರಿಹಾರಕ್ಕೆ ಧಾವಿಸಿ ಬಂದ ಶೌರ್ಯ ವಿಪತ್ತು ತಂಡ

ಮಂಡೆಕೋಲು ಗ್ರಾಮದ ಶಾಲಾಬಳಿಯ ಭವಾನಿಶಂಕರ ಆಚಾರ್ಯ ಎಂಬವರ ಮನೆಗೆ ಇಂದು ಬೆಳಗ್ಗೆ ಬೀಸಿದ ಬಾರೀ ಗಾಳಿಗೆ ಪಕ್ಕದಲ್ಲಿದ್ದ ದೊಡ್ಡದಾದ ತೆಂಗಿನ ಮರ ಬುಡ ಸಹಿತ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಮನೆಗೆ ಬಿದ್ದ ಮರವನ್ನು ತೆರವುಗೊಳಿಸಿ ಮನೆಯನ್ನು ದುರಸ್ತಿಗೊಳಿಸುವಲ್ಲಿ ಸಹಕಾರ ನೀಡಿದ್ದಾರೆ. 
   ಇಂದು ಬೆಳಗ್ಗೆ ಬೀಸಿದ ಗಾಳಿ ಮಳೆಗೆ ಪಕ್ಕದಲ್ಲೇ ಇದ್ದ ಬೃಹತ್ ಗಾತ್ರದ ತೆಂಗಿನಮರ ಬುಡ ಸಹಿತ ಬಿದ್ದಿದೆ. ಮನೆಗೆ ತೀವ್ರ ಹಾನಿಯಾಗಿದ್ದು ಈ ಸಂದರ್ಭದಲ್ಲಿ ಮನೆಯೊಳಗೆ ಭವಾನಿಶಂಕರರ ತಾಯಿ ಹಾಗೂ ಪತ್ನಿ ಇದ್ದರೂ ಯಾವುದೇ ತೊಂದರೆಗಳಾಗಿಲ್ಲವೆಂದು ತಿಳಿದುಬಂದಿದೆ. 

ಘಟನೆ ನಡೆದ ಸ್ಥಳಕ್ಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟಗಳ ತಾಲೂಕು ಅಧ್ಯಕ್ಷ ಸುರೇಶ್ ಕಣೆಮರಡ್ಕ, ಪಂಚಾಯತ್ ಸದಸ್ಯರಾದ‌ ಅನಿಲ್ ತೋಟಪ್ಪಾಡಿ, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಧಾವಿಸಿ ಮರ ತೆರವು ಮಾಡಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಮಾಡಿನ ದುರಸ್ಥಿ ಮಾಡುವಲ್ಲಿ ಸಹಕಾರ ನೀಡಿರುತ್ತಾರೆ.


ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿಯವರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.