ಕೆವಿಜಿ ಐಪಿಎಸ್ ನಲ್ಲಿ ಗೇಮ್ಸ್ ಕ್ಲಬ್ ಉದ್ಘಾಟನೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಜು. 24 ರಂದು ಗೇಮ್ಸ್ ಕ್ಲಬ್( ಚೆಸ್ , ಕ್ಯಾರಮ್, ಟೇಬಲ್ ಟೆನ್ನಿಸ್ ಕ್ಲಬ್ )ನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ‘ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಆಟವು ಅತ್ಯಗತ್ಯ. ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು’ ಹುರಿದುಂಬಿಸಿದರು.

ಈ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಕ್ರೀಡಾ ನಿರ್ದೇಶಕ ಮೆಲ್ವಿನ್ ಎಲ್ ಪಾಯಸ್, ದೈಹಿಕ ಶಿಕ್ಷಕ ತೀರ್ಥ ವರ್ಣ ಬಳಡ್ಕ, ಶಿಕ್ಷಕ ವೃಂದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.