ಆಸರೆಯಾಗಿ ನಿಂತ ಗ್ರಾ.ಪಂ ಸದಸ್ಯರು
ನಾಲ್ಕೂರು ಗ್ರಾಮದ
ಚಾರ್ಮತ ವಲ್ಪಾರೆ, ಕಾಯರ್ ಮುಗೇರ್ ಬಳಿ ಜು.24 ರ ಸಂಜೆ ಸುರಿದ ಗಾಳಿ ಮಳೆಗೆ ಹಲವಾರು ಮರ, ಕೃಷಿ ಹಾನಿಯಾಗಿದೆ.
ಕೆಲ ಕಡೆ ರಸ್ತೆಯೂ ಬ್ಲಾಕ್ ಆಗಿತ್ತು, 3 ವಿದ್ಯುತ್ ಕಂಬ ಮರಿದಿದೆ. ಶಿವಕುಮಾರ್ ಅವರ 200 ಅಧಿಕ ಅಡಿಕೆ ಮರ, ಧರ್ಮಪಾಲ ಸಂಪ್ಯಾಡಿ ಅವರ100 ಕ್ಕೂ ಅಧಿಕ ಅಡಿಕೆ, ನಾರಾಯಣ ಗೌಡ ವಲ್ಪಾರೆ, ಧನಂಜಯ ಸಂಪ್ಯಾಡಿ, ಯೋಗೀಶ್ ಕಾಯರ್ ಮುಗೇರ್, ಸುಂದರ ಕಾಯರ್ ಮುಗೇರ್, ಬೆಳ್ಯಪ್ಪ ಕಾಯರ್ ಮುಗೇರ್ ಮತ್ತಿತರರ ಕೃಷಿ ನಾಶವಾಗಿದೆ.
ರಸ್ತೆ ಬ್ಲಾಕ್ ತೆರವು, ಅಧಿಕಾರಿಗಳನ್ನು ಕರೆಸಿ ಸಮೀಕ್ಷೆ ನಡೆಸುವ ಮತ್ತಿತರರ ವ್ಯವಸ್ಥೆಗಳನ್ನು ಈ ಭಾಗದ ಗ್ರಾ.ಪಂ ಸದಸ್ಯರುಗಳಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ಪ್ರಮೀಳಾ ಎರ್ದಡ್ಕ, ಲೀಲಾವತಿ ಅಂಜೇರಿ ಹಾಗೂ ಕಂದಾಯ, ಅರಣ್ಯ ಇಲಾಖೆಯವರು ಸ್ಥಳೀಯರು ಸೇರಿ ಸುಸ್ಥಿರ ಗೊಳಿಸಲು ಸಹಕರಿಸಿದರು.