ಜು. 31: ಬೆಳಾಲು ಶ್ರೀ ಧ.ಮಂ. ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ ನಿವೃತ್ತಿ

0

ಬೆಳಾಲು ಶ್ರೀ ಧರ್ಮಸ್ಥಳ
ಮ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿ ಜು. 31ರಂದು
ನಿವೃತ್ತಿ ಹೊಂದಲಿದ್ದಾರೆ.
ಸುಳ್ಯ ತಾಲೂಕಿನ ಚೊಕ್ಕಾಡಿ ಬಳಿಯ ಚೂಂತಾರು ದಿ. ಮಹಾಲಿಂಗ ಭಟ್ಟ ಮತ್ತು ದಿ. ಸಾವಿತ್ರಿ ದಂಪತಿಯ ಪುತ್ರರಾದ ರಾಮಕೃಷ್ಣ ಭಟ್ಟರು 2001ರಲ್ಲಿ ಬೆಳಾಲು ಪ್ರೌಢಶಾಲೆಗೆ ಮುಖ್ಯ ಶಿಕಕರಾಗಿ 23 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ. ಶಿಕ್ಷಕ
ವೃತ್ತಿಯುದ್ದಕ್ಕೂ ಶೈಕ್ಷಣಿಕ ಮತ್ತು ಶೈಕ್ಷಣಿಕ
ಪೂರಕವಾಗಿ ವಿಶೇಷ ಕಾರ್ಯಕ್ರಮಗಳು,
ಮಾದರಿ ಪ್ರಯೋಗಗಳು ಹಾಗೂ ಸಾಹಿತ್ಯ
-ಸಾಂಸ್ಕೃತಿಕ ಯೋಜನೆಗಳ ಮೂಲಕ
ತಾಲೂಕಿನಾದ್ಯಂತ ಗಮನ ಸೆಳೆದ, ಅಕ್ಷರ
ಲೋಕದ ಸಾರಥ್ಯ ವಹಿಸಿದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಊರಿಗೇ ಮುಖ್ಯ
ಬೇಕಾದವರಾಗಿದ್ದರು. ಇವರು ಶಾಲೆಯಲ್ಲಿ ಶೈಕ್ಷಣಿಕವಾಗಿ
ಆಯೋಜಿಸಿರುವ ಚಟುವಟಿಕೆಗಳು,
ಶಾಲಾವರಣದಲ್ಲಿ ಕೈಗೊಂಡಿರುವ ಪರಿಸರ
ಮತ್ತು ಜಲ ಸಂರಕ್ಷಣೆಯ ಕಾರ್ಯಗಳು
ಮಾದರಿ. ಶಾಲೆಯನ್ನೇ ಕಲಾ ಗ್ಯಾಲರಿಯಾಗಿ
ರೂಪಿಸಿ, ವರ್ಷದುದ್ದಕ್ಕೂ ಮಕ್ಕಳಿಗೆ ತರಬೇತಿ, ಕಲಿಕಾ ಚಟುವಟಿಕೆಗಳು, ಬೇಸಿಗೆ
ಶಿಬಿರ, ಯಕ್ಷಗಾನ ತರಬೇತಿ ಹೀಗೆ ಹತ್ತಾರು
ಚಟುವಟಿಕೆಗಳನ್ನು ಆಯೋಜಿಸುತ್ತಿದ್ದರು.
ಪೋಷಕರಿಗೆ, ಸಾರ್ವಜನಿಕರಿಗೆ ಉಪಯುಕ್ತ
ಕಾರ್ಯಕ್ರಮಗಳನ್ನು ಆಯೋಜಿಸಿ ಶಾಲೆಯತ್ತ ಸಮುದಾಯವನ್ನು ಸೆಳೆದ
ಇವರು ಉತ್ತಮ ಬರಹಗಾರರೂ ಹೌದು. ಇವರ ಪತ್ನಿ ಶ್ರೀಮತಿ ಜ್ಯೋತಿ ಭಟ್ ಗೃಹಿಣಿಯಾದರೆ ಪುತ್ರಿ ಕು. ವೈಷ್ಣವಿ ಎಂ.ಎಸ್.ಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಹಾಗೂ ಪುತ್ರ ಭಾರವಿ ಅಂತಿಮ ವರ್ಷದ ಬಿಕಾಂ ಪದವಿಯನ್ನು ಓದುತ್ತಿದ್ದಾರೆ.