ಪಂಜದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ- ಉದ್ಘಾಟನೆ

0

ಲಯನ್ಸ್ ಕ್ಲಬ್ ಪಂಜ , ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು,ಪುತ್ತೂರು ಮತ್ತು ಸುಳ್ಯ ,
ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಉಡುಪಿ, ಮಂಗಳೂರು ಮತ್ತು ಸುಳ್ಯ, ಡಾ. ಬಿ ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸೆಂಚುರಿ ಗ್ರೂಪ್ಸ್ ಬೆಂಗಳೂರು, ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ 18ನೇ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸೆ ಶಿಬಿರ ಜು.28 ರಂದು ಪಂಜ ಲಯನ್ಸ್ ಭವನದಲ್ಲಿ ಉದ್ಘಾಟನೆ ಗೊಂಡಿತು.

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ”ಪಂಜ ಲಯನ್ಸ್ ಕ್ಲಬ್ “ಪ್ರತೀ ವರ್ಷವೂ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸೆ ಶಿಬಿರ ಮತ್ತು ಅನೇಕ ಸಾಮಾಜಿಕ ಸೇವೆಗಳನ್ನು ನೀಡುತ್ತಿದೆ”. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಲಯನ್ಸ್ ವಲಯಾಧ್ಯಕ್ಷ ಪ್ರೊ ಕೆ ರಂಗಯ್ಯ ಶೆಟ್ಟಿಗಾರ್ ಮಾತನಾಡಿ “ಲಯನ್ಸ್ ಕ್ಲಬ್ ಪಂಜ ಜಿಲ್ಲೆಯಲ್ಲಿ ಅತ್ಯುತ್ತಮ ಕ್ಲಬ್ ಆಗಿ ಬೆಳೆದಿದೆ.
ಲಯನ್ಸ್ ಕ್ಲಬ್ ಸಮಾಜ ಮುಖಿ ಕೆಲಸಗಳಲ್ಲಿ ಅಂಧತ್ವ ನಿವಾರಣೆ ಕೂಡ ಮುಖ್ಯ ಕಾರ್ಯಾಕ್ರಮವಾಗಿದೆ.’ ಎಂದು ಹೇಳಿದರು.

ಅತಿಥಿ ಪ್ರಸಾದ್ ನೇತ್ರಾಲಯದ ಮುಖ್ಯಸ್ಥ ಡಾ.ಕೃಷ್ಣಕಾಂತ್ , ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಮೋಹನ್ ಕೂಟಾಜೆ, ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ, ಶಿಬಿರದ ಪ್ರಾಯೋಜಕ ಸೀತಾರಾಮ ಗೌಡ ಕುದ್ವ, ಕಾರ್ಯಕ್ರಮ ಸಂಯೋಜಕರಾದ ಬಾಲಕೃಷ್ಣ ಗೌಡ ಕುದ್ವ, ನೇಮಿರಾಜ ಪಲ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.‌

ಕಾರ್ಯಕ್ರಮದಲ್ಲಿ ಕರುಣಾಕರ ಎಣ್ಣೆಮಜಲು ವೇದಿಕೆಗೆ ಆಹ್ವಾನಿಸಿದರು. ಕುಮಾರಸ್ವಾಮಿ ಕಿನ್ನಿಕುಮೇರಿ ಪ್ರಾರ್ಥಿಸಿದರು. ಬಾಲಕೃಷ್ಣ ಕುದ್ವ ಸ್ವಾಗತಿಸಿದರು. ಸೀತಾರಾಮ ಕುದ್ವ ಪ್ರಾಸ್ತಾವಿಕ ಗೈದರು.ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸೈಯದ್ ಮಾಹಿತಿ ನೀಡಿದರು.ಮೋಹನ್ ಕೂಟಾಜೆ ವಂದಿಸಿದರು.