ಜಯನಗರ :ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

0

ಶಿಕ್ಷಣ,ಜೀವನದಲ್ಲಿ ಉತ್ತಮ ಗುರಿಯನ್ನು ನಿರೂಪಿಸುವ ಸಾಧನ ವಾಗಿದೆ:ನ್ಯಾಯಧೀಶೆ ಕು. ಅರ್ಪಿತಾ

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸುಳ್ಯ ಹಾಗೂ ಜಯನಗರ ಸ ಉ ಹಿ ಪ್ರಾ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ಬಾಲ ಕಾರ್ಮಿಕ ನಿಷೇದ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಜು. 29 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ಸಿವಿಲ್ ನ್ಯಾಯಾಲಯದ ನ್ಯಾಯಧೀಶೆ ಕು.ಅರ್ಪಿತಾ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಶಿಕ್ಷಣ ಮನುಷ್ಯರ ಜೀವನದಲ್ಲಿ ಉತ್ತಮ ಮಾರ್ಗವನ್ನು ನೀಡುವ ಸಾಧನವಾಗಿದೆ. ಆದರಿಂದ ವಿದ್ಯಾರ್ಥಿಗಳು ಬಾಲ ಕಾರ್ಮಿಕ ನಿಷೇದ ಕಾಯ್ದೆಯ ಬಗ್ಗೆ ಅರಿತು ಕೊಳ್ಳುವುದರ ಜೊತೆಗೆ ಅದನ್ನು ಜೀವನದಲ್ಲಿ ಅಳವಡಿಸಿ ಮತ್ತೊಬ್ಬರಿಗೆ ತಿಳಿ ಹೇಳುವಂತ ಕಾರ್ಯಕ್ಕೆ ಮುಂದಾಗ ಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸುಳ್ಯ ವಕೀಲೆ ಶ್ರೀಮತಿ ಪ್ರತಿಭಾ ಜ್ಯೋತಿ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕ ನಿಷೇದ ಕಾಯ್ದೆ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಮುದ್ದಪ್ಪ ವಹಿಸಿದ್ದರು.ವೇದಿಕೆಯಲ್ಲಿ ಸುಳ್ಯ ಪ್ಯಾನಲ್ ವಕೀಲರಾದ ಜಗದೀಶ್ ಡಿ ಪಿ, ಸ್ಥಳೀಯ ನ ಪಂ ಸದಸ್ಯ ಬಾಲ ಕೃಷ್ಣ ಭಟ್ ಕೊಡಂಕ್ಕೇರಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಸ್ವಾಗತಿಸಿ ಶಿಕ್ಷಕರು ಗಳಾದ ನಳಿನಾಕ್ಷಿ ವಂದಿಸಿ ಮಮತಾ ಕಾರ್ಯಕ್ರಮ ನಿರೂಪಿಸಿದರು.