ಪರಪ್ಪೆಯಲ್ಲಿ ಮುಖ್ಯರಸ್ತೆ ಮಧ್ಯೆ ಹೊಂಡಕ್ಕೆ ಬಿದ್ದ ಲಾರಿ

0

ಜಾಲ್ಸೂರು – ಕಾಸರಗೋಡು ರಸ್ತೆ ಸಂಚಾರಕ್ಕೆ ತೊಂದರೆ

ಜಾಲ್ಸೂರು – ಕಾಸರಗೋಡು ಅಂತರರಾಜ್ಯ ರಸ್ತೆಯ ಪರಪ್ಪೆ ಬಳಿ ಲಾರಿಯೊಂದು ಮುಖ್ಯರಸ್ತೆಯಲ್ಲಿದ್ದ ಭಾರೀ ಗಾತ್ರದ ಹೊಂಡಕ್ಕೆ ಬಿದ್ದ ಪರಿಣಾಮವಾಗಿ ರಸ್ತೆ ಸಂಚಾರಕ್ಕೆ ತೊಂದರೆಯಾದ ಘಟನೆ ಆ.1ರಂದು ಸಂಜೆ ಸಂಭವಿಸಿದೆ.

ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪೆಯಲ್ಲಿ ಮುಖ್ಯರಸ್ತೆಯಲ್ಲಿ ಭಾರೀ ಗಾತ್ರದ ಹೊಂಡ ನಿರ್ಮಾಣವಾಗಿ, ಅದರಲ್ಲಿ ಮಳೆನೀರು ತುಂಬಿಕೊಂಡಿದೆ.

ಸುಳ್ಯ ಭಾಗದಿಂದ ಮರದ ಲೋಡ್ ಸಾಗಿಸುತ್ತಿದ್ದ ಲಾರಿ ಚಾಲಕ ಇದನ್ನು ಗಮನಿಸದೇ ಹೋದ ಕಾರಣದಿಂದ ಹೊಂಡಕ್ಕೆ ಬಿದ್ದಿರುವುದಾಗಿ ತಿಳಿದುಬಂದಿದೆ.

ರಸ್ತೆಯ ಮಧ್ಯೆ ಭಾಗದಲ್ಲಿ ಲಾರಿ ಹೊಂಡಕ್ಕೆ ಬಿದ್ದಿರುವುದರಿಂದ ಅಂತರರಾಜ್ಯ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿರುವುದಾಗಿ ತಿಳಿದುಬಂದಿದೆ.