ಸುಳ್ಯ ತಾಲೂಕಿನ 15 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಗೆ ಅರ್ಜಿ ಆಹ್ವಾನ

0

ದ.ಕ ಜಿಲ್ಲೆಯ ಪ್ರವರ್ಗ “ಬಿ” ಮತ್ತು “ಸಿ” ಗೆ ಸೇರಿದ ದೇವಸ್ಥಾನ/ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ, ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತಂತೆ ಜಿಲ್ಲಾ ಧಾರ್ಮಿಕ ಪರಿಷತ್ ಪ್ರಕಟಣೆಯನ್ನು ಹೊರಡಿಸಿದೆ.

ಸುಳ್ಯ ತಾಲೂಕಿನ 15 ದೇವಸ್ಥಾನಗಳು ಈ ಪಟ್ಟಿಯಲ್ಲಿ ಸೇರಿಕೊಂಡಿದೆ.

ಮರ್ಕಂಜ ಗ್ರಾಮದ ಕಾವೂರು ಶ್ರೀ‌ಮಹಾವಿಷ್ಣು ಮೂರ್ತಿ ದೇವಸ್ಥಾನ, ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಶ್ರೀರಾಜನ್ ದೈವ ಪುರುಷಭೂತ ದೈವಸ್ಥಾನ, ಗುತ್ತಿಗಾರು ವಳಲಂಬೆ ಶ್ರೀ ಶಂಕಪಾಲ ಸುಬ್ರಹ್ಮಣ್ಯ ದೇವಸ್ಥಾನ, ಅಮರಪಡ್ನೂರು ಶ್ರೀ ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ಭೂತ ದೈವಸ್ಥಾನ, ಸುಳ್ಯ ಶ್ರೀ ಕಾಯರ್ತೋಡಿ ಶ್ರೀ‌ಮಹಾವಿಷ್ಣುಮೂರ್ತಿ ದೇವಸ್ಥಾನ, ಮಂಡೆಕೋಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉಬರಡ್ಕ ಮಿತ್ತೂರು ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನ, ಮುರುಳ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ,

ನಾಲ್ಕೂರು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಾಲ್ಸೂರು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಕೊಲ್ಲಮೊಗ್ರ ಕೊಚ್ಚಿಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ‌ ದೇವಸ್ಥಾನ, ಐವತ್ತೊಕ್ಲು ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನ, ಪಂಬೆತ್ತಾಡಿ ಶ್ರೀ ಗೋಳಿಕಟ್ಟೆ ವಿನಾಯಕ ದೇವಸ್ಥಾನ, ಮುರುಳ್ಯ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕಡಬ ತಾಲೂಕಿನ ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಳ್ಪ ಗ್ರಾಮದ ಶ್ರೀ ನೇರ್ಪು ರಾಜನ್ ದೈವಸ್ಥಾನ, ಏನೆಕಲ್ಲು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.