ಬಿಕೋ ಎನ್ನುತ್ತಿರುವ ಸುಬ್ರಹ್ಮಣ್ಯ, ದೇವರ ದರ್ಶನಕ್ಕೆ ಸಕಾಲ

0

ಸದಾ ಭಕ್ತರಿಂದ ಜಿಗಿಗುಡುತಿದ್ದ ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಸಂಖ್ಯ ಕಡಿಮೆ ಆಗಿ ಬಿಕೋ ಅನ್ನುತ್ತಿದೆ.

ಕೆಲ ದಿನಗಳಿಂದ ಬಿಡುವಿಲ್ಲದೆ ಸುರಿಯುವ ಮಳೆ, ಹೆದ್ದಾರಿಗಳು ಗುಡ್ಡ ಜರಿದು ಬ್ಲಾಕ್ ಆಗುತ್ತಿರುವ ವಿಚಾರ ತಿಳಿದು ಜನರು ಹೊರ ಸಂಚಾರ ಕಡಿಮೆ ಗೊಳಿಸಿದಂತಾಗಿದೆ. ಈ ಎಲ್ಲಾ ಕಾರಣಗಳಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸದಾ ನೂಕು ನುಗ್ಗಲು ಇರುತ್ತಿದ್ದ ದೇವರ ದರ್ಶನದ ಸರತಿ ಕಾಣುತ್ತಿಲ್ಲ. ಬಂದ ಭಕ್ತರು ಅನಾಯಾಸವಾಗಿ ದೇವರ ದರ್ಶನ ಪಡೆದು ತೆರಳುತ್ತಿದ್ದಾರೆ.