ಆಲೆಟ್ಟಿ: ಬಡ್ಡಡ್ಕ- ಕೂರ್ನಡ್ಕ ರಸ್ತೆ ಮಧ್ಯೆ ಮೋರಿ ಕುಸಿತ-ಸಂಪರ್ಕ ಕಡಿತಗೊಳ್ಳುವ ಬಗ್ಗೆ ನಾಗರಿಕರ ಆತಂಕ

0

ಬಡ್ಡಡ್ಕದಿಂದ ಕೂರ್ನಡ್ಕ ಕಡೆಗೆ ಹೋಗುವ ರಸ್ತೆಯಲ್ಲಿ ದೋಣಿಮೂಲೆ ಎಂಬಲ್ಲಿ ತಿರುವಿನಲ್ಲಿರುವ ‌ಮೋರಿ ಬದಿಯು ಕುಸಿಯಲಾರಂಭಿಸಿದ್ದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.


ವಿಪರೀತ ಮಳೆ ಸುರಿಯುವ ಸಂದರ್ಭದಲ್ಲಿ ತೋಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ಇದೀಗ ರಸ್ತೆಯ ಬದಿಯನ್ನು ಕೊರೆಯಲಾರಂಭಿಸಿದೆ. ಇನ್ನಷ್ಟು ನೀರಿನ ಪ್ರಮಾಣ ಹೆಚ್ಚು ಹರಿದು ಬಂದಲ್ಲಿ‌ ಸಂಪರ್ಕ ಕಡಿತಗೊಳ್ಳುವ ಬಹುತೇಕ ಸಾಧ್ಯತೆ ಇದೆ. ಆಲೆಟ್ಟಿ ಪಂಚಾಯತ್ ವತಿಯಿಂದ ವಾಹನ ಸವಾರರಿಗೆ ಎಚ್ಚರಿಕೆಯ ಬ್ಯಾನರ್ ಹಾಗೂ ಬ್ಯಾರಿಕೇಡ್ ನ್ನು ಅಳವಡಿಸಿರುತ್ತಾರೆ.