ಮುರೂರು: ಕೇರಳ ಲೋಕೋಪಯೋಗಿ ಇಲಾಖೆಯ ವತಿಯಿಂದ ರಸ್ತೆಗೆ ಜಲ್ಲಿ ಹಾಕಿ ತಾತ್ಕಾಲಿಕ ದುರಸ್ಥಿ

0

ಕೊಟ್ಯಾಡಿ – ಈಶ್ವರಮಂಗಲ – ಕಾವು ಮೂಲಕ ಸುಳ್ಯಕ್ಕೆ ಬರುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್

ಜಾಲ್ಸೂರು- ಕಾಸರಗೋಡು ಅಂತರರಾಜ್ಯ ಹೆದ್ದಾರಿಯ ಮುರೂರಿನಲ್ಲಿ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಹೊಂಡವನ್ನು ಕೇರಳ ಲೋಕೋಪಯೋಗಿ ಇಲಾಖೆಯ ವತಿಯಿಂದ ಜಲ್ಲಿ ಹಾಕಿ ತಾತ್ಕಾಲಿಕ ದುರಸ್ಥಿ ವ್ಯವಸ್ಥೆ ಆ.3ರಂದು ಅಪರಾಹ್ನ ನಡೆಸಲಾಯಿತು.

ಕೇರಳ ಲೋಕೋಪಯೋಗಿ ಇಲಾಖೆಯ ವತಿಯಿಂದ ಟಿಪ್ಪರ್ ಮೂಲಕ ಒಂದು ಲೋಡ್ ಜಲ್ಲಿ ತಂದು ರಸ್ತೆಗೆ ಹಾಕಿ ಲೆವೆಲ್ ಮಾಡಿರುವುದಾಗಿ ತಿಳಿದುಬಂದಿದೆ. ನೀರು ಹರಿದುಹೋಗಲು ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿರುವುದಾಗಿ ತಿಳಿದುಬಂದಿದೆ.

ಕಾಸರಗೋಡಿನಿಂದ ಜಾಲ್ಸೂರು ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಕೇರಳ ಕೆ.ಎಸ್.ಆರ್.ಟಿ.ಸಿ. ಮಲಬಾರ್ ಬಸ್ಸು ಆ.2ರಂದು ಕೊಟ್ಯಾಡಿ – ಅಡೂರು – ಮಂಡೆಕೋಲು ರಸ್ತೆಯ ಮೂಲಕ ಸುಳ್ಯಕ್ಕೆ ಬಂದಿದ್ದು, ಆ.3ರಂದು ಬೆಳಿಗ್ಗೆಯಿಂದ ಕೊಟ್ಯಾಡಿ – ಈಶ್ವರಮಂಗಲ – ಕಾವು ಮಾರ್ಗವಾಗಿ ಸುಳ್ಯಕ್ಕೆ ಪ್ರಯಾಣಿಸುತ್ತಿರುವುದಾಗಿ ತಿಳಿದುಬಂದಿದೆ.