ಕೆವಿಜಿ ಐಪಿಎಸ್ ನಲ್ಲಿ ಇಂಗ್ಲಿಷ್ ಕಲಿಕಾ ಮತ್ತು ಸಂವಹನ ಕಾರ್ಯಗಾರ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅ. 3 ರಂದು ಇಂಗ್ಲಿಷ್ ಕಲಿಕಾ ಮತ್ತು ಸಂವಹನ ಕಾರ್ಯಗಾರ ನಡೆಯಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಡಾ.ಉಜ್ವಲ್ ಯು ಜೆ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಶುಭ ಹಾರೈಸಿದರು. ಕಾರ್ಯಕ್ರಮದ ತರಬೇತಿದಾರರಾಗಿ ಕೆವಿಜಿ ಐಪಿಎಸ್ ನ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಶಿಕ್ಷಕರಿಗೆ ಹಲವಾರು ಮಾಹಿತಿಗಳನ್ನು ನೀಡಿ ಇಂದಿನ ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಭಾಷಾ ಕಲಿಕೆಯು ಅತ್ಯಗತ್ಯ. ನಮ್ಮ ಸ್ವಯಂ ಅಭ್ಯಾಸದೊಂದಿಗೆ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ನಾವು ಸಂವಹನ ಮಾಡುವ ಇಂಗ್ಲಿಷ್ ಭಾಷೆ ಯಾವ ರೀತಿಯಾಗಿ ಇರಬೇಕು ಮತ್ತು ನಾವು ಇನ್ನಷ್ಟು ಸುಲಭವಾಗಿ ಇಂಗ್ಲಿಷ್ ಭಾಷೆಯನ್ನು ಯಾವ ರೀತಿ ಕಲಿಯಬಹುದು ಎಂದು ಚಟುವಟಿಕೆ ಸಹಿತವಾಗಿ ವಿವರಿಸಿದರು.
ಕಾರ್ಯಕ್ರಮದ ಮುಂದಾಳತ್ವವನ್ನು ಶಾಲಾ ಶಿಸ್ತು ಸಂಯೋಜನಾಧಿಕಾರಿ ಶೋಭಾ ಜಿ.ವೈ ವಹಿಸಿದರು. ಶಾಲೆಯ ಎಲ್ಲಾ ಶಿಕ್ಷಕ ವೃಂದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.