ಆ.15: ಅರೆಭಾಷೆ ಅಕಾಡೆಮಿ ಹಾಗೂ ಲಯನ್ಸ್ ವತಿಯಿಂದ ಆಟಿ ಪೂರ್ಲು -2024

0

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಲಯನ್ಸ್ ಕ್ಲಬ್ ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಆ. 15ರಂದು ಪೂರ್ವಾಹ್ನ ಗಂಟೆ 10ರಿಂದ ಆಟಿ ಪೂರ್ಲು – 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸುಳ್ಯದ ಲಯನ್ಸ್ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷತೆಯನ್ನು ಸಾರುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲಯನ್ಸ್ ಕ್ಲಬ್ ಸುಳ್ಯ ಅಧ್ಯಕ್ಷ ಲ. ರಾಮಕೃಷ್ಣ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಸಹ ಶಿಕ್ಷಕ ಕಿಶೋರ್ ಕುಮಾರ್ ಕಿರ್ಲಾಯ ಆಟಿ ವಿಶೇಷತೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಆಟಿ ಪೊರ್ಲು – 2024ರ ಆಚರಣೆ ವೇಳೆ ಆಟಿಯ ವಿಶೇಷ ಆಗಿರುವಂತಹ ಕಳಂಜ ಕುಣಿತದ ಪ್ರಾತ್ಯಕ್ಷಿಕೆ, ಚೆನ್ನಮಣೆ ಪ್ರಾತ್ಯಕ್ಷಿಕೆ, ಹಿರಿಯರ ಕ್ರೀಡೆಯಾಗಿದ್ದಂತಹ ಕಾಯಿ ಕುಟ್ಟುವುದು ಮುಂತಾದ ಅಪರೂಪದ ವಿಚಾರಗಳ ಪ್ರಾತ್ಯಕ್ಷಿಕೆ ಇರುತ್ತದೆ. ಆಟಿಯ ವಿಶೇಷ ಖಾದ್ಯಗಳ ಪ್ರಸ್ತುತಿಯನ್ನು ಮಾಡಲಾಗುವುದು. ಚೆನ್ನಮಣೆ ಸ್ಪರ್ಧೆ, ಸೋಬಾನೆ ಸ್ಪರ್ಧೆ, ಅರೆಭಾಷೆ ಆಶುಕವಿತೆ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲು ಯೋಜಿಸಲಾಗಿದೆ.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮ ಆಯೋಜಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.