ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಹಾಗೂ ಅಭಿನಂದನಾ ಕಾರ್ಯಕ್ರಮ
ಶೈಕ್ಷಣಿಕ ಮಾಹಿತಿ ಮತ್ತು ತರಬೇತಿ ಸಮುದಾಯ ಕೇಂದ್ರವಾದ nLIGHT ಎಜುಕೇಶನಲ್ ಸರ್ವಿಸಸ್ ನ ನೂತನ ಕಛೇರಿ ಹಾಗೂ ಸಂಸ್ಥೆಯ ಲೋಕಾರ್ಪಣೆ ಸುಳ್ಯ ಪಿ ಎ ಆರ್ಕೆಡ್ ನಲ್ಲಿ ಆಗಸ್ಟ್11ರಂದು ನಡೆಯಿತು.
ಅಸ್ಸಯ್ಯದ್ ಕುಂಞಕೋಯ ತಂಙಳ್ ಸಅದಿ ಸುಳ್ಯ ರವರು ನೂತನ ಕಛೇರಿ ಉದ್ಘಾಟಿಸಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮ ಅಕಾಡೆಮಿಯ ವಿದ್ಯಾರ್ಥಿಯಾದ ಶಮ್ಮಾಸ್ ರವರ ಖಿರಾಅತ್ ಪಠಣದೊಂದಿಗೆ ಪ್ರಾರಂಭಗೊಂಡಿತು. ಸಂಸ್ಥೆಯ ಸದಸ್ಯರಾದ ಅಬ್ದುಲ್ ಲತೀಫ್ ಅಡ್ಕಾರು ಸ್ವಾಗತಿಸಿ, ಬಶೀರ್ ಅರಂಬೂರು ಪ್ರಾಸ್ತಾವಿಕ ಭಾಷಣಗೈದು ಸಂಸ್ಥೆ ನಡೆದುಬಂದ ದಾರಿ, ಹಮ್ಮಿಕೊಂಡ ಯೋಜನೆಗಳು ಮತ್ತು ಮುಂದಿನ ಕಾರ್ಯವಿಧಾನಗಳನ್ನು ವಿವರಿಸಿದರು.
ಪೇರಡ್ಕ ಜಮಾಅತ್ ಖತೀಬರಾದ ನಈಮ್ ಫೈಝಿ ಮುಕ್ವೆ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಸೌದಿ L&T ಕಂಪನಿಯ AGM ಅಝೀಜ್ ಗೂನಡ್ಕ, ಗಾಂಧಿನಗರ ಜಮಾಅತ್ ಸಮಿತಿಯ ಕಾರ್ಯದರ್ಶಿ ಮೊಯಿಯದ್ದೀನ್ ಫ್ಯಾನ್ಸಿ, ಅರಂತೋಡು ಜಮಾಅತ್ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಗುಂಡಿ, ಜೂನಿಯರ್ ಕಾಲೇಜಿನ ಅಧ್ಯಾಪಕರಾದ ಯೂಸುಫ್, ಪಂಜ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರಫೀಕ್ ಐವತೊಕ್ಲು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರದಲ್ಲಿ ಅರಂಬೂರು ಮಸೀದಿ ಖತೀಬರಾದ ಮೊಯಿನುದ್ದೀನ್ ಫೈಝಿ ಪೈಂಬಚ್ಚಾಲ್, ಗಾಂಧಿನಗರ ಜಮಾಅತ್ ಸಮಿತಿ ಅಧ್ಯಕ್ಷರಾದ ಕೆ.ಎಂ.ಎಸ್ ಮಹಮ್ಮದ್ ಹಾಜಿ, ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಹಾಜಿ ಅಬ್ದುಲ್ಲ ಕಟ್ಟೆಕ್ಕಾರ್, ಅನ್ಸಾರಿಯ ಎಜುಕೇಶನ್ ಸೆಂಟರ್ ನ ಅಧ್ಯಕ್ಷರಾದ ಅಬ್ದುಲ್ ಮಜೀದ್ ಜನತಾ, ಅಲ್ಪಸಂಖ್ಯಾತ ಸೊಸೈಟಿಯ ಅಧ್ಯಕ್ಷರಾದ ಇಕ್ಬಲ್ ಎಲಿಮಲೆ, ಅಡ್ಕಾರ್ ಜಮಾಅತಿನ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕದಿಕಡ್ಕ, ನ.ಪಂ ಸದಸ್ಯರಾದ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಕೆ.ಎಸ್. ಉಮ್ಮರ್, ಸಿದ್ದೀಕ್ ಕೊಕೊ, ಸುನ್ನಿ ಮಹಲ್ ಸಮಿತಿ ಅಧ್ಯಕ್ಷರಾದ ಎಸ್.ಎ ಅಬ್ದುಲ್ ಹಮೀದ್ ಹಾಜಿ, ಅನ್ಸಾರಿಯ ಎಜುಕೇಶನ್ ಸೆಂಟರ್ ನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಗ್ರೀನ್ ವ್ಯೂ ಶಾಲೆಯ ಸಂಚಾಲಕರಾದ ಎಸ್ ಎಂ ಅಬ್ದುಲ್ ಹಮೀದ್, ಸುಳ್ಯ ಜಮಾಅತ್ ಸಮಿತಿಯ ಮಾಜಿ ಅಧ್ಯಕ್ಷರಾದ ಆದಂ ಹಾಜಿ ಕಮ್ಮಾಡಿ, ಪತ್ರಕರ್ತರಾದ ಶರೀಫ್ ಜಟ್ಟಿಪಳ್ಳ, ಕರ್ನಾಟಕ ಬ್ಲಡ್ ಬ್ಯಾಂಕ್ ನ ಸಂಯೋಜಕ ಇಕ್ಬಾಲ್ ಕನಕಮಜಲು, ಮಧುರ ಸ್ಕೂಲ್ ಈಶ್ವರಮಂಗಲದ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್ ಅಡಿಮರಡ್ಕ, ಅಲ್ಪಸಂಖ್ಯಾತ ಇಲಾಖೆಯ ಕಮಾಲ್ ಕಡಬ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅನಿವಾಸಿ ಉದ್ಯಮಿ ಅಬ್ದುಲ್ ಲತೀಫ್ ನ್ಯಾಷನಲ್, ನಿವೃತ್ತ ಉಪನ್ಯಾಸಕರಾದ ಎ ಅಬ್ದುಲ್ಲಾ ಅರಂತೋಡು, ಅನ್ಸಾರ್ ಪ್ರ.ಕಾರ್ಯದರ್ಶಿ ಹನೀಫ್, ಅರಂತೋಡು ಜಮಾಅತ್ ಸಮಿತಿಯ ಅಮೀರ್ ಕುಕ್ಕುಂಬಳ್ಳ, ಉದ್ಯಮಿ ಹಾಜಿ ಅಬ್ದುಲ್ ಖಾದರ್ ಆಝಾದ್ ಮೊದಲಾದವರು, ವಿದ್ಯಾರ್ಥಿಗಳು ಹಾಗು ಪೋಷಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ಇಂಜಿನಿಯರಿಂಗ್ ವಿಷಯದ ಅನ್ವೇಷಣಾ ಮಹಾಪ್ರಬಂಧ ಮಂಡಿಸಿ ಡಾಕ್ಟರೆಟ್ ಪಡೆದ ಡಾ.ಸಲೀಂ ಮಲಿಕ್ ಕಮ್ಮಾಡಿಯವರನ್ನು ಅಭಿನಂದಿಸಲಾಯಿತು. SSLC ಹಾಗು PUC ಯಲ್ಲಿ ಅತ್ಯತ್ತುಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಅಕಾಡೆಮಿಯ ತರಬೇತಿದಾರ ನಿಝಾರ್ ಪಾಲಡ್ಕ ಕಾರ್ಯಕ್ರಮ ನಿರೂಪಿಸಿ, ಸದಸ್ಯ ಆಸೀಫ್ ಪನ್ನೆ ಧನ್ಯವಾದ ಸಮರ್ಪಿಸಿದರು. ಸಂಸ್ಥೆಯ ಸದಸ್ಯರುಗಳಾದ ಮೊಹಮ್ಮದ್ ಕಮಾಲ್ ಅಜ್ಜಾವರ, ಕೆ. ಬಿ ಸಂಶುದ್ದೀನ್, ಮೊಹಮ್ಮದ್ ಮಸೂದ್ ಸುಳ್ಯ, ಮೊಹಮ್ಮದ್ ಆಶಿಕ್ ಝಕರಿಯ, ಕೆ.ಬಿ ಅಬ್ದುಲ್ ಮುಜೀಬ್, ಶಾಹೀದ್ ಪಾರೆ ಹಾಗು ಜಾಫರ್ ಸಾದಿಕ್ ಗೂನಡ್ಕ ವಿವಿಧ ಕಾರ್ಯಕ್ರಮ ಸಂಯೋಜಿಸಿದರು.