ಮಂಗಳೂರು ಆಸ್ಪತ್ರೆಗೆ ದಾಖಲು
ಹಳೆಗೇಟಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಲಕ್ಷ್ಮಿ ಆಟೋ ಎಲೆಕ್ಟ್ರಿಕಲ್ ಸಂಸ್ಥೆಯ ಮಾಲಕ ಸತ್ಯ ಎಂಬುವವರು ಆ 12 ರಂದು ಕೆಲಸದ ವೇಳೆಯಲ್ಲಿ ಹಠಾತ್ ಕುಸಿದು ಬಿದ್ದು ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸತ್ಯ ಅವರಿಗೆ ಬಿ ಪಿ ಸಮಸ್ಯೆ ಇದ್ದು ಘಟನೆ ನಡೆದ ದಿನ ಸಂಜೆ ಸುಮಾರು 6 ಘಂಟೆ ಯ ವೇಳೆ ಕೆಲಸ ಮಾಡುತ್ತಿರುವಾಗಲೆ ತಲೆ ತಿರುಗಿದಂತೆ ಆಗಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಪಕ್ಕದಲ್ಲಿದ್ದ ಗ್ರಾಹಕರು ಕೂಡಲೇ ಅವರನ್ನು ಹಿಡಿದುಕ್ಕೊಂಡಿದ್ದು ಸುಳ್ಯ ಆಸ್ಪತ್ರೆಗೆ ಕೊಂಡೋಗಿದ್ದಾರೆ.
ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ್ದು ಬಳಿಕ ಅವರನ್ನು ಮಂಗಳೂರು ಇಂಡಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.