ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಸಹಕಾರ ಕ್ಷೇತ್ರದಲ್ಲಿ ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಪ್ರೋತ್ಸಾಹಕ ಪ್ರಶಸ್ತಿಯನ್ನು ಸಹಕಾರ ರತ್ನ ಡಾ.ಎಂ ಎನ್ ರಾಜೇಂದ್ರ ಕುಮಾರ್ ಪ್ರಧಾನ ಮಾಡಿದರು.

ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಪ್ರಶಸ್ತಿ ಸನ್ಮಾನ ಸ್ವೀಕರಿಸಿದರು. ಶಾಸಕಿ ಭಾಗೀರಥಿ ಮುರುಳ್ಯ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್ ಮನ್ಮಥ, ಸಂಘದ ನಿರ್ದೇಶಕರುಗಳಾದ ಮಣಿಕಂಠ ಕೊಳಗೆ, ಗಿರೀಶ್ ಕಟ್ಟೆಮನೆ, ಮೋನಪ್ಪ ಕೊಳಗೆ, ಸುರೇಶ್ ಚಾಳೆಪ್ಪಾಡಿ, ಕೊಲ್ಲಮೊಗ್ರು ಶಾಖಾ ಮ್ಯಾನೇಜರ್ ಚಂದ್ರಶೇಖರ ಬಟ್ಟೋಡಿ, ನಿವೃತ್ತ‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಾಮೋದರ ಕೆ.ಎಸ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಗದಾಧರ ಮಲ್ಲಾರ ಮತ್ತಿತರರು ಉಪಸ್ಥಿತರಿದ್ದರು.