ರೋಟರಿ ಕ್ಲಬ್ ಸುಬ್ರಹ್ಮಣ್ಯ ವತಿಯಿಂದ ಜಿಲ್ಲಾ ಯೋಜನೆ ಕುಡಿಯುವ ನೀರು ಮತ್ತು ನಿರ್ವಹಣೆ ಬಗ್ಗೆ ಜಲ ಸಿರಿ, ಜಲ ನಿಧಿ, ಮತ್ತು ಜಲ ಸಂರಕ್ಷಣೆ ಕಾರ್ಯಕ್ರಮ ಆ.13 ರಂದು ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಯಿತು.
ಕೆ ಯಸ್ ಯಸ್ ಕಾಲೇಜು ಮತ್ತು ಯಸ್ ಯಸ್ ಪಿ ಯು ಕಾಲೇಜಿನ ಸುಮಾರು 1000 ವಿದ್ಯಾರ್ಥಿಗಳಿಗೆ ಜಲ ಜಾಗೃತಿ ಮಾಡುವ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಕುಡಿಯುವ ನೀರು ಮತ್ತು ನಿರ್ವಹಣೆ ವಿಭಾಗದ ಆರ್ ಐ ಡಿಸ್ಟ್ರಿಕ್ 3181 ಜಿಲ್ಲಾ ಚೈರಪರ್ಸನ್ ಮತ್ತು ಮಂಗಳೂರಿನ ನಿರ್ಮಿತಿ ಕೇಂದ್ರ ಇದರ ಅಸಿಸ್ಟೆಂಟ್ ಎಕ್ಸಕ್ಯೂಟಿವ್ ಡೈರೆಕ್ಟರ್ ರೋ ರಾಜೇಂದ್ರ ಕಲ್ಬಾವಿಯವರು ನಡೆಸಿಕೊಟ್ಟರು. ರೋಟರಿ ಆರ್ ಐ ಡಿಸ್ಟಿಕ್ 3181 ರೋಟರಿ ಮೀನ್ಸ್ ಬ್ಯುಸಿನೆಸ್ ಜಿಲ್ಲಾ ಚೈರಪರ್ಸನ್ ಮಾಧವ ಸುವರ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರೋಟರಿಯ ಪೂರ್ವ ಅಸಿಸ್ಟೆಂಟ್ ಗವರ್ನರ್ ರೋ ಶಿವರಾಮ್ ಏನೇಕಲ್ ನಡೆಸಿಕೊಟ್ಟರು ಹಾಗೂ ಮುಖ್ಯ ಅತಿಥಿ ಯಾಗಿ ಶಾಲಾ ಮುಕ್ಯೋಪಾಧ್ಯಾಯರಾದ ಶ್ರೀಮತಿ ವಿದ್ಯಾರತ್ನ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಫಲಾರದ ಡಾ ಸಂಕೀರ್ತಹೆಬ್ಬಾರ್ ಉಪಸ್ಥಿತರಿದ್ದರು . ಕಾರ್ಯಕ್ರಮ ನಿರ್ವಹಣೆಯನ್ನು
ರೋಟರಿಯ ಪೂರ್ವಧ್ಯಕ್ಷರಾದ ಕಿಶೋರ್ ಕುಜುಗೋಡು ಮಾಡಿದರು ಮತ್ತು ಸುಬ್ರಮಣ್ಯ ಎ ಯು ರವರು ಅತಿಥಿಗಳನ್ನು ಪರಿಚಯಿಸಿದರು ಹಾಗೂ ಕು. ಜಾಸ್ಮಿತ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಕಲ್ಬಾವಿ ನೀರಿನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು
ಕೆ.ಎಸ್.ಎಸ್.ಕಾಲೇಜಿನಲ್ಲಿ ಜಲ ನಿಧಿ ಕಾರ್ಯಕ್ರಮ
ಕೆ.ಎಸ್.ಎಸ್.ಕಾಲೇಜಿನಲ್ಲಿ ಜಲ ನಿಧಿ ಕಾರ್ಯಕ್ರಮ 11.30ಕ್ಕೆ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಜಾತಾ ಕಲ್ಲಾಜೆ ಉದ್ಘಾಟನೆ ನೆರವೇರಿಸಿದರು. ಭರತ್ ನೆಕ್ರಾಜೆ ವೇದಿಕೆಗೆ ಆಹ್ವಾನಿಸಿದರು. ಮುಖ್ಯ ಅತಿಥಿಯಾಗಿ ಪ್ರಾಂಶಪಾಲರಾದ ದಿನೇಶ್ ವೇದಿಕೆಯಲ್ಲಿದ್ದರು.
ಎಸ್.ಎಸ್‌ಪಿ.ಯು ಸುಬ್ರಹ್ಮಣ್ಯ
ಸುಬ್ರಹ್ಮಣ್ಯ ದ
ಯಸ್ ಯಸ್ ಪಿ ಯು ಕಾಲೇಜಿನಲ್ಲಿ ಅಪರಾಹ್ನ 2.30ಕ್ಕೆ ಜಲನಿಧಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕಾರ್ಯಕ್ರಮ ವನ್ನು ಎಸ್. ಎಸ್. ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ನಾಯಕ್ ಉದ್ಘಾಟಿಸಿದರು.ವೇದಿಕೆಗೆ ಗೋಪಾಲ ಎಣ್ಣೆಮಜಲ್ ಆಹ್ವಾನಿಸಿದರು.
ರೋಟರಿ ಕ್ಲಬ್ ಸುಬ್ರಹ್ಮಣ್ಯ ಪೂರ್ವಧ್ಯಕ್ಷರಾದ ಮಾಯಿಲಪ್ಪ ಸಂಕೇಶ್, ಕಿಶೋರ್ ಕುಜುಗೋಡು, ಭರತ್ ನೆಕ್ರಾಜೆ, ಶಿವರಾಮ್ ಏನೇಕಲ್, ಗೋಪಾಲ ಎಣ್ಣೆಮಜಲ್, ಲೋಕೇಶ್ ಬಿ ಯನ್, ಖಜಾಂಜಿ, ಜಯಪ್ರಕಾಶ್, ಕಾರ್ಯದರ್ಶಿ ಚಿದಾನಂದ ಕುಳ ಸದಸ್ಯರಾದ ನಾಗರಾಜ್ ಪರಮಲೆ ಮತ್ತು ರವಿಕಕ್ಕೆಪದವು ಸಹಕರಿಸಿದರು.