ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗ್ರಂಥಾಲಯ ದಿನಾಚರಣೆವೈದ್ಯಕೀಯ ಶಿಕ್ಷಣದಲ್ಲಿ ಗ್ರಂಥಾಲಯದ ಉಪಯೋಗದ ಬಗ್ಗೆ ಡಾ ವೀಣಾ ಎನ್ ಅವರಿಂದ ವಿಶೇಷ ಉಪನ್ಯಾಸ

0

ಗ್ರಂಥಾಲಯ ವಿಜ್ಞಾನದ ಪಿತಾಮಹ ಶಿಯಾಲಿ ರಾಮಾಮೃತ ರಂಗನಾಥ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 12 ಸೋಮವಾರದಂದು ಸಾಹಿತ್ಯಿಕ ಸಂಘ ಕೆವಿಜಿ ವೈದ್ಯಕೀಯ ಕಾಲೇಜು ಇದರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವೈದ್ಯಕೀಯ ಕಾಲೇಜಿನ ಡೀನ್ ಡಾ ನೀಲಾಂಬಿಕೆ ನಟರಾಜನ್ ಅವರು ವಹಿಸಿದ್ದರು. ಬಳಿಕ ಮಾತನಾಡಿದ ಅವರು ಗ್ರಂಥಾಲಯ ದಿನಾಚರಣೆ ಹಾಗೂ ಗ್ರಂಥಾಲಯದ ಉಪಯೋಗದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾರತೀಯ ವೈದ್ಯಕೀಯ ಸಂಘ ಸುಳ್ಯ ಶಾಖೆ ಇದರ ಅಧ್ಯಕ್ಷರಾದ ಡಾ ವೀಣಾ ಎನ್ ಮಾತನಾಡಿ ಗ್ರಂಥಾಲಯದ ಉಪಯೋಗ ಅದರ ನಿರ್ವಹಣೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಗ್ರಂಥಾಲಯಗಳ ಪಾತ್ರದ ಬಗ್ಗೆ ತಮ್ಮ ಅನುಭವ ಹಾಗೂ ವಿಚಾರಧಾರೆಯನ್ನು ಹಂಚಿಕೊಂಡರು.


ಈ ಸಂಧರ್ಭದಲ್ಲಿ , ಕಾಲೇಜಿನ ಗ್ರಂಥಪಾಲಕರು ಮತ್ತು ಸಾಹಿತ್ಯದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಬಳಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆಯನ್ನು ನಡೆಸಲಾಯಿತು.