ಬೆಳ್ಳಾರೆ : ಕ್ರೈನ್ ರಿಕ್ಷಾ ಡಿಕ್ಕಿ- ರಿಕ್ಷಾ ಚಾಲಕನಿಗೆ ಗಾಯ

0

ಬೆಳ್ಳಾರೆ ಕೆಳಗಿನ ಪೇಟೆಯಲ್ಲಿ ರಿಕ್ಷಾ ಹಾಗೂ ಕ್ರೈನ್ ಡಿಕ್ಕಿಯಾಗಿ ರಿಕ್ಷಾ ಚಾಲಕ ಗಾಯಗೊಂಡ ಘಟನೆ ಇಂದು ನಡೆದಿದೆ.


ಮೇಲಿನ ಪೇಟೆಯಿಂದ ಕೆಳಗಿನ ಪೇಟೆ ಕಡೆ ಹೋಗುವ ರಿಕ್ಷಾ ಹಾಗೂ ಕೆಳಗಿನ ಪೇಟೆಯಿಂದ ಮೇಲಿನ ಪೇಟೆ ಕಡೆ ಬರುವ ಕ್ರೈನ್ ಬೆಳ್ಳಾರೆ ಗುರುರಾಘವೇಂದ್ರ ಸ್ಡೋರ್ಸ್ ಎದುರುಗಡೆ ಡಿಕ್ಕಿ ಹೊಡೆದುಕೊಂಡಿತು.
ಪರಿಣಾಮ ರಿಕ್ಷಾ ಚಾಲಕ ಕೊಡಿಯಾಲದ ರಾಮಚಂದ್ರ ಎಂಬವರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ.