ಮುಚ್ಚಿಲ ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ ವತಿಯಿಂದ ಸ್ವಾತಂತ್ರೋತ್ಸವ

0

ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ ಇದರ ವತಿಯಿಂದ 78ನೇ ಸ್ವಾತಂತ್ರೋತ್ಸವ ಅಂಗವಾಗಿ ಕಲ್ಮಡ್ಕ ಗ್ರಾ. ಪo. ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಧ್ವಜಾರೋಹಣ ಗೈದು ಮಾತನಾಡಿದರು.


ಕಾರ್ಯಕ್ರಮ ದಲ್ಲಿ ಕ್ಲಬ್ ಅಧ್ಯಕ್ಷ ನಝೀರ್, ಮಾಜಿ ಅಧ್ಯಕ್ಷ ಅಶ್ರಫ್ ಮರಕ್ಕಡ,ತಾ. ಪo. ಮಾಜಿ ಸದಸ್ಯ ಅಬ್ದುಲ್ ಗಫೂರ್, ಕಲ್ಮಡ್ಕ ಗ್ರಾ. ಪಂ. ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಫೀಕ್ ಸಿ. ಎಂ, ಪಂಜ ಪಂಚಾಯತ್ ಸದಸ್ಯ ಜಗದೀಶ್ ಪುರಿಯ, ಎಣ್ಮೂರು ಐವತೋಕ್ಲು ಜಮಾತ್ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಉಪಾಧ್ಯಕ್ಷ ಬಷೀರ್ ಸಿ. ಎಂ, ಅಬ್ದುಲ್ ಖಾದರ್ ಟಿ. ಎಸ್, ಎಸ್.ಡಿ.ಎಂ.ಸಿ ಎಣ್ಮೂರು ಅಧ್ಯಕ್ಷ ಶರೀಫ್ ಗುತ್ತಿಗೆ, ಎಂ.ವೈ.ಎಸ್. ಅಧ್ಯಕ್ಷ ರಫೀಕ್ ಟಿ. ಎಸ್,ಹನೀಫ್ ಎಂ. ಕೆ, ಹಮೀದ್ ಮರಕ್ಕಡ, ರೆಕ್ಕಾ ಸ್ಪೋರ್ಟ್ಸ್ ಅಧ್ಯಕ್ಷ ಮುಸ್ತಫಾ ಕಜೆ, ಹಾಗೂ ಕ್ಲಬ್ ಸದಸ್ಯರು, ಊರಿನವರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.


ಅಶ್ರಫ್ ಮರಕ್ಕಡ ಕಾರ್ಯಕ್ರಮ ನಿರೂಪಿಸಿದರು, ಸ್ವಾಗತಿಸಿ, ವಂದಿಸಿದರು.