ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಸಂಪಾಜೆಯ ಚೌಕಿಯಿಂದ ವಿದ್ಯಾರ್ಥಿಗಳು ,” ಭಾರತ್ ಮಾತಾ ಕೀ ಜೈ ” ” ವಂದೇ ಮಾತರಂ”ಘೋಷಣೆಗಳನ್ನು ಕೂಗುತ್ತಾ ಭವ್ಯ ಮೆರವಣಿಗೆಯೊಂದಿಗೆ ಶಾಲೆಗೆ ಆಗಮಿಸಿದರು. ಬಳಿಕ ಧ್ವಜಾರೋಹಣವನ್ನು ಸಂಪಾಜೆಯ ಹಿರಿಯ ವಿದ್ಯಾರ್ಥಿ ಹಾಗೂ ಯೋಧರಾದ ದೇವಿ ಚರಣ್ ನಿರ್ವಹಿಸಿದರು. ಸಂಪಾಜೆ ಶಾಲೆಯ ಎಜ್ಯುಕೇಶನ್ ಸೊಸೈಟಿಯ ಸಂಚಾಲಕರಾದ ಎಂ .ಶಂಕರ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು . ಈ ಸಂದರ್ಭದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ಪಾರ್ವತಿ, ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಸಂಚಾಲಕರಾದ ಕೊಂದಲಕಾಡು ನಾರಾಯಣ ಭಟ್, ಸಂಪಾಜೆ ಲಯನ್ಸ್ ಕ್ಲಬ್ ನಿರ್ದೇಶಕರಾದ ಇಂದಿರಾ ದೇವಿ ಪ್ರಸಾದ್, ಸಂಪಾಜೆ ಎಜ್ಯುಕೇಶನ್ ಸೊಸೈಟಿ ಕೋಶಾಧಿಕಾರಿ ಪದ್ಮ್ಮಯ್ಯ ಬಿ.ಆರ್, ಸಂಪಾಜೆ ಎಜ್ಯುಕೇಶನ್ ಸೊಸೈಟಿ ನಿರ್ದೇಶಕರಾದ ಕೊರಗಪ್ಪ, ಚೆಂಬು ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಹುಲ್ಲು ಬೆಂಕಿ, ಸಂಪಾಜೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಲೋಕ್ಯಾ ನಾಯ್ಕ್, ಸಂಪಾಜೆ ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಐತ್ತಪ್ಪ, ಸಹ ಶಿಕ್ಷಕರಾದ ಹೆಚ್ ಜಿ ಕುಮಾರ್, ದೈಹಿಕ ಶಿಕ್ಷಕರಾದ ಕುಶಾಲಪ್ಪ ಕೆ, ದ. ಕ ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ ಹನೀಫ್ ಮತ್ತು ಶಿಕ್ಷಕವೃಂದ, ಸಂಪಾಜೆ ಲಯನ್ಸ್ ಕ್ಲಬ್ ನ ಪದಾಧಿಕಾರಿಗಳು ನಿರ್ದೇಶಕರುಗಳು,ವಿದ್ಯಾರ್ಥಿ ವೃಂದ ಪೋಷಕರು ಉಪಸ್ಥಿತರಿದ್ದರು. ಬಳಿಕ ವೇದಿಕೆಯಲ್ಲಿ ಅತಿಥಿಗಳನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು.