ಪೆರುವಾಜೆ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಆ.15 ರಂದು ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.
ಬೆಳಿಗ್ಗೆ ನೀರ್ಕಜೆ ಅಮೃತ ಸರೋವರದ ಬಳಿ ಸುಬ್ರಾಯ ಭಟ್ ನೀರ್ಕಜೆಯವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಶಾಲಾ ವಿದ್ಯಾರ್ಥಿಗಳು, ಪಂಚಾಯತ್,ಸಾರ್ವಜನಿಕರಿಂದ ಪಂಚಾಯತ್ ವಠಾರದಿಂದ ಜೆಡಿ ಅಡಿಟೋರಿಯಂ ವರೆಗೆ ಸ್ವಾತಂತ್ರ್ಯ ನಡಿಗೆ ನಡೆಯಿತು.
ಬಳಿಕ ಸಾರ್ವಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಬಳಿಕ ಮಧ್ಯಾಹ್ನ ಸಭಾ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪೆರುವಾಜೆ ಕಾಲೇಜಿನ ಉಪನ್ಯಾಸಕ ಕಾಂತರಾಜು ಸ್ವಾತಂತ್ರ್ಯೋತ್ಸವ ದ ಮಹತ್ವದ ಬಗ್ಗೆ ಪ್ರಧಾನ ಭಾಷಣ ಮಾಡಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ಕಾನಾವು,ವೆಂಕಪ್ಪ ಗೌಡ ನಾರ್ಕೋಡು,ಪೆರುವಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಲ.ಉಷಾ ಬಿ.ಭಟ್,ಜೇಸಿ ಅಧ್ಯಕ್ಷ ಜಗದೀಶ್ ರೈ, ಹಿರಿಯರಾದ ವೆಂಕಟಕೃಷ್ಣ ರಾವ್,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶಹಿನಾಜ್,ಸದಸ್ಯರಾದ ಪದ್ಮನಾಭ ಶೆಟ್ಟಿ,ಸಚಿನ್ ರಾಜ್ ಶೆಟ್ಟಿ,ಶ್ರೀಮತಿ ಚಂದ್ರಾವತಿ,ಶ್ರೀಮತಿ ರೇವತಿ,ಮಾಧವ ,ಶ್ರೀಮತಿ ಗುಲಾಬಿ ಉಪಸ್ಥಿತರಿದ್ದರು.
ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪಿಡಿಒ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿ,ಪಂಚಾಯತ್ ಸಿಬ್ಬಂದಿ ಶ್ರೀಮತಿ ಅಕ್ಷತಾ,ಶ್ರೀಮತಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಿಬ್ಬಂದಿ ವರ್ಗದವರು ಸಹಕರಿಸಿದರು.