ಬ್ಲೆಸ್ಡ್ ಕುರಿಯಾಕೋಸ್ ಅಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಬ್ಲೆಸ್ಡ್ ಕುರಿಯಾಕೋಸ್ ಅಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ ಭಾರತೀಯ ಯೋಧ ದಿನೇಶ್ ಸಿ. ಡಿ. ಚೆಮ್ಮೂರು ನೆರವೇರಿಸಿ, ಸ್ವಾತಂತ್ರ್ಯ ಸ್ವಾತಂತ್ರ್ಯ ದಿನಾಚರಣೆ ಮತ್ತು ಭಾರತೀಯ ಸೈನ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ನಂತರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಭಾ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಲಿಜೋ ಜೋಸ್, ಪದಾಧಿಕಾರಿಗಳಾದ ಸಂತೋಷ್ ಪಳಂಗಾಯ, ಪುರುಷೋತ್ತಮ, ಶಾಲಾ ಮುಖ್ಯೋಪಾಧ್ಯಯಿನಿಯಾದ ಸಿಸ್ಟರ್ ಟ್ರೀಸಾ ಜಾನ್, ಶಾಲಾ ಸಂಚಾಲಕಿ ಸಿಸ್ಟರ್ ಪಾವನಾ, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾಭಿಮಾನಿಗಳು, ಪೋಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸುಧಾರಾಣಿ ಸ್ವಾಗತಿಸಿ, ಶ್ರೀಮತಿ ರಮ್ಯ ವಂದಿಸಿ, ಶಾಲಾ ವಿದ್ಯಾರ್ಥಿನಿಯರಾದ ಗಾಯತ್ರಿ ಮತ್ತು ಚಿರಸ್ವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಸಿಹಿ ತಿಂಡಿ ಹಂಚಲಾಯಿತು.