ಕೊಲ್ಲಮೊಗ್ರು: ಶಾಲೆಯಲ್ಲಿ ಸ್ವಾತಾಂತ್ರೋತ್ಸವ

0

ಕೊಲ್ಲಮೊಗ್ರು ಬಂಗ್ಲೆ ಗುಡ್ಡೆ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಾಂತಾಳ ಇವರು ಧ್ವಜಾರೋಹಣ ನೆರವೇರಿಸಿದರು,‌

ವಿದ್ಯಾರ್ಥಿಗಳಿಂದ ಜಾತಾ ತದನಂತರ ಸಭಾ ಕಾರ್ಯಕ್ರಮದಲ್ಲಿ ಈ ಶಾಲೆಯ ಹಳೆವಿದ್ಯಾರ್ಥಿಗಳು ನಾಲ್ವರು ಯೋಧರಾದ ಶ್ರೀಯುತ ಪದ್ಮನಾಭ ಗೋಳ್ಯಾಡಿ, ತೇಜಕುಮಾರ್ ಕೊಂದಾಳ, ದಯಾನಂದ ಜಾಲುಮನೆ, ಅನಿತಾ ಮಹೇಶ್ ಶಿವಾಲ ಇವರ ದೇಶ ಸೇವೆಯನ್ನು ಗುರುತಿಸಿ,ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದತ್ತಿನಿಧಿ ವಿತರಣೆ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ಪತ್ರ ವಿತರಣೆ, ಸ್ಪರ್ಧೆಗಳ ಬಹುಮಾನ ವಿತರಣೆ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಎನ್.ಜಿ , ಗ್ರಾಮ ಪಂಚಾಯತ್ ಅಧ್ಯಕ್ಷೆ
ಶ್ರೀಮತಿ ಜಯಶ್ರೀ ಚಾಂತಾಳ ,ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಬೊಳಿಯಮ್ಮ ಗಣಪತಿ ಮಾಸ್ಟರ್ ಚಾಂತಾಳ, ಹಳೆ ವಿದ್ಯಾರ್ಥಿ ಕೆ.ಪಿ.ಗಿರಿಧರ , ಗ್ರಾಮಾಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಶ್ರೀಯುತ ಚಂದ್ರಶೇಖರ ಕೋನಡ್ಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಎಸ್. ಡಿ ಎಂ.ಸಿ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಪೋಷಕ ವೃಂದ, ಅಡುಗೆ ಸಹಾಯಕರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಶಿಕ್ಷಕ ವೃಂದ, ಊರ ವಿದ್ಯಾಭಿಮಾನಿಗಳು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.