ಏನೆಕಲ್ಲು ಗ್ರಾಮದ ಮಿಥುನ್ ಮಲ್ಲಾರ ರವರು ಬೀಚ್ ಕಬಡ್ಡಿ ಇಂಡಿಯಾ ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ಇವರು ಇತ್ತೀಚೆಗೆ ಬಿಹಾರದ ಬೋಧಗಯದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ಬೀಚ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡದಿಂದ ಪ್ರತಿನಿಧಿಸಿದ್ದರು.
ಇವರು ಏನೆಕಲ್ಲು ಗ್ರಾಮದ ಮಲ್ಲಾರ ಮನೆ ಸುಂದರ ಗೌಡ ಮತ್ತು ವಸಂತಿ ದಂಪತಿ ಪುತ್ರ.