ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆ.15 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಿನೇಶ ಪಿ. ಟಿ ಪ್ರಾಂಶುಪಾಲರು, ಕೆ. ಎಸ್. ಎಸ್ ಕಾಲೇಜು ಇವರು ವಹಿಸಿದರು.

ಎಕ್ಸ್ ಹವಾಲ್ದಾರ್, ಇಂಡಿಯನ್ ಆರ್ಮಿ ಮತ್ತು ವ್ಯಪನ್ ಇನ್ಸ್ಪೆಕ್ಟರ್ ಇನ್ ಆರ್ಮಿ ಕಾಲೇಜು ಕುಸುಮಾಧರ.ಕೆ ಧ್ವಜಾರೋಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಾಕ್ತಾನಾ ವಿದ್ಯಾರ್ಥಿ ಸಂಘದ ಸದಸ್ಯರಾದ ತೇಜಸ್ ಮತ್ತು ಸುಹಾಸ್ ಹಾಗೂ ಐ. ಕ್ಯೂ. ಎ. ಸಿ ಸಂಯೋಜಕಿಯಾದ ಶ್ರೀಮತಿ ಲತಾ ಬಿ.ಟಿ ಯವರು ಉಪಸ್ಥಿತರಿದ್ದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.