ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ಪೂಜೆ

0

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕ್ಷೇತ್ರ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಸೇವಾ ಸಮಿತಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಪುರೋಹಿತ ಸಚಿನ್ ಶರ್ಮರವರ ಪೌರೋಹಿತ್ಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಅನುವಂಶಿಕ ಮೋಕ್ತೆಸರರಾದ ಚಿನ್ನಯ್ಯ ಆಚಾರ್ಯ, ಆಡಳಿತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಮರೋಳಿ, ಉತ್ಸವ ಸಮಿತಿ ಅಧ್ಯಕ್ಷ ಮಮತಾ ಚಂದ್ರಶೇಖರ, ಕಾರ್ಯದರ್ಶಿ ಮತ್ತು ಸದಸ್ಯರು ಸೇವಾ ಸಮಿತಿ ಅಧ್ಯಕ್ಷ ಮಾಲ್ಯತ್ತಾರು, ಕಾರ್ಯದರ್ಶಿ ಸುಜಿತ್ ಕುಕ್ಕಟ್ಟೆ ಮತ್ತು ಸದಸ್ಯರು, ಆಡಳಿತ ಸಮಿತಿ ಕಾರ್ಯದರ್ಶಿ, ಪುರುಷೋತ್ತಮ ಆಚಾರ್ಯ, ಊರವರು ಉಪಸಿತರಿದ್ದರು.